Youth parliament-ಎರಡು ದಿನ ಯೂತ್ ಪಾರ್ಲಿಮೆಂಟ್, ಈ ಬಾರಿ ವಿಕಸಿತ ಭಾರತದ ಅಡಿ ಕಾರ್ಯಕ್ರಮ

 

ಯುವ ಸಂಸತ್-2025 ನ್ನ ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಜಂಟಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. 14,15 ರಂದು ನಡೆಯಲಿದೆ.


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕಿ ಶುಭ ಮರವಂತೆ, ವಿಕಾಸಿತ ಭಾರತದ ಗುರಿಯಾಗಿಸಿಕೊಂಡು ಈ ಯುವ‌ಸಂಸತ್ ನ್ನ ನಡೆಸಲು ತೀರ್ಮಾನಿಸಿದ್ದು, 18-25 ನೇ ವರ್ಷದ ಯುವಕರು ಭಾಗಿಯಾಗಲಿದ್ದಾರೆ. 1 ಲಕ್ಷ ಯುವ ಸಮುದಾಯ ಅಭಿವೃದ್ಧಿ ಮಾಡಲು ತೀರ್ಮಾನಿಸಿದ್ದು ಅದರ ಅಡಿ ಈ ಯುವ ಸಂಸತ್ ನಡೆಸಲಾಗಿದೆ ಎಂದರು. 


ರಾಜ್ಯದಲ್ಲಿ 12 ನೋಡಲ್ ಕೇಂದ್ರಗಳನ್ನ ಗುರುತಿಸಲಾಗಿದೆ. ಚಿಕ್ಕ ಮಗಳೂರು ಮತ್ತು ಶಿವಮೊಗ್ಗದಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಯುವಸಂಸತ್ ನಡೆಯಲಿದೆ. ಯುವ ಭಾರತ ಪೋರ್ಟಲ್ ಮೂಲಕ ಹೆಸರು ನೋಂದಣಿ ಮಾಡಲು ಅವಕಾಶವಿದೆ. ಇದರಲ್ಲಿ ವಿಕಸಿತ ಭಾರತ ಎಂದರೆ ಏನು ಎಂಬುದರ ಬಗ್ಗೆ ವಿಡಿಯೋ ಅಪಲೋಡ್ ಮಾಡಬೇಕು ಎಂದು ವಿವರಿಸಿದರು. 


150 ಜನರ ಆಯ್ಕೆ ಮಾಡಲಾಗುವುದು. ಇವರಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 10 ಜನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟ ನಂತರ ಕೇಂದ್ರ ಮಟ್ಟಕ್ಕೆ ಆಯ್ಕೆ ಮಾಡಿ ಅದರಲ್ಲಿ 3 ಗೆದ್ದವರಿಗೆ ಎರಡು ಲಕ್ಷ ರೂ. ಹಣ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ ಬಂದವರಿಗೆ ಸಂಸತ್ ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು. 


ಇಲ್ಲಿನ ನೆಹರೂ ಯುವಕ ಕೇಂದ್ರ ಮತ್ತು ಸಹ್ಯಾದ್ರಿ ಕಾಲೇಜಿನ ಎನ್ ಎಸ್ ಎಸ್ ನ ಐವರು ಜಡ್ಜ್ ಗಳು ನೇಮಿಸಲಾಗಿದೆ. 10 ಜನ ವಿದ್ಯಾರ್ಥಿಗಳನ್ನ ಆರಿಸಲಿದ್ದಾರೆ

Post a Comment

أحدث أقدم