Veerashaiva mahasabha condemns MLA Yathnal statement-ಯತ್ನಾಳ್ ಹೇಳಿಕೆಗೆ ವೀರಶೈವ ಮಹಾಸಭಾ ಖಂಡನೆ

 

ಶಾಸಕ ಯತ್ನಾಳ್ ಮಾಜಿ ಸಿಎಂ ಯಡಿಯೂರಪ್ಪನವರು ವೀರಶೈವ ಲಿಂಗಾಯತ ಅಲ್ಲ ಎಂದಿರುವುದನ್ನ ಅಖಿಲ ಭಾರತೀಯ ವೀರಶೈವ ಮಹಾಸಭಾ ಶಿವಮೊಗ್ಗ ಘಟಕ ತೀವ್ರವಾಗಿ ಖಂಡಿಸಿದೆ. 


ಸುದ್ದಿಗೋಷ್ಠಿ ನಡೆಸಿದ ಮಹಾಸಭಾದ ರುದ್ರಮುನಿ‌ಸಜ್ಜನ್ ಬಿಎಸ್ ವೈ ಬಳೆಶೆಟ್ಟರ್ ಗೆ ಸೇರಿದವರಾಗಿದ್ದು, ಇವರನ್ನ ಲಿಂಗಾಯಿತ ಅಲ್ಲ ಎಂದಿರುವ ಯತ್ನಾಳ್ ವೀರ ಶೈವ ಲಿಂಗಾಯಿತರೇ ಅಲ್ಲ ಎಂದಿದ್ದಾರೆ. 87 ಉಪಪಂಗಡದ ವೀರಶೇವ ಲಿಂಗಾಯಿತರಲ್ಲಿ, ಅಕ್ಕಸಾಲಿಗ ಲಿಂಗಾಯಿತ, ಬೇಡ ಜಂಗಮ, ಗೌಳಿ, ಕಾವಾಡಿಗ, ಗಾಣಿಗ ಸೇರಿದಂತೆ 84 ಪಂಗಡದವರಿದ್ದಾರೆ ಎಂದರು. 


ಕುಂಬಾರ, ಕಮ್ಮಸಾಲೆ, ಕ್ಷೌರಿಕ, ಭಜಂತ್ರಿ, ಬಣಗಾರ, ಬಿಳಿಮಲ್ಲಿಗೆ ಹಡಪದ, ಹೂಗಾರ, ಕಾವಳಿ ಕುಂಬಾರ, ಕುರುಬ ಜನಾಂಗ ಲಿಂಗಾಯರಲ್ಲಿದ್ದಾರೆ. ಯತ್ನಾಳ್ ಅವರಿಗೆ ಪಂಚಮಸಾಲಿ ಒಬ್ಬರೇ ಲಿಂಗಾಯಿತರಲ್ಲ ಎಂದರು. 


ಶಾಮನೂರು ಶಿವಶಂಜರಪ್ಪನವರ ವಿರುದ್ಧವೂ ಯತ್ನಾಳ್ ಮಾತನಾಡಿದ್ದಾರೆ. ಶಾಮನೂರು ಶಿವಶಂಕರಪ್ಪ 87 ಪಂಗಡಕ್ಕೆ ಅಧ್ಯಕ್ಷರು ಎಂದು ಸ್ಪಷ್ಟನೆ ನೀಡಿದ ರುದ್ರಮುನಿ, ಯತ್ನಾಳ್ ಬಿಎಸ್ ವೈ ಗೆ ಅಪಮಾನಿಸಿಲ್ಲ ಬಳೇಶೆಟ್ಟರ್ ಜನಾಂಗಕ್ಕೆ ಅವಮಾನಿಸಿದ್ದಾರೆ. ಯತ್ನಾಳ್ ಗೆ ಮಾಹಿತಿ ಕೊರತೆಯಿದೆ ಎಂದರು. 

Post a Comment

أحدث أقدم