ಎರಡು ಪ್ರತ್ಯೇಕ ರಸ್ತೆ ಅಪಘಾತ ಸಂಭವಿಸಿದ್ದು ಒಂದು ರಸ್ತೆ ಅಪಘಾತದ ಬಗ್ಗೆ ಕುಟುಂಬ ಅನುಮಾನ ವ್ಯಕ್ತಪಡಿಸಿದೆ.
ಮರಕ್ಕೆ ಬೈಕ್ (Bike) ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತನನ್ನು ರಾಜು (27) ಎಂದು ಗುರುತಿಸಲಾಗಿದೆ.
ಶಿವಮೊಗ್ಗದ ಸಾಗರ ರಸ್ತೆಯ ವಾಜಪೇಯಿ ಬಡಾವಣೆ ಬಳಿ ಬೈಕ್ (Bike) ಮರಕ್ಕೆ ಡಿಕ್ಕಿಯಾಗಿದೆ. ನಂತರ ಬೈಕ್ ಸಹಿತ ಸವಾರ ರಾಜು ಚರಂಡಿಗೆ ಬಿದಿದ್ದಾನೆ. ಗಂಭೀರ ಗಾಯಗೊಂಡು ಅಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಸಿದ್ದರಹಳ್ಳಿಯ ರಾಜು ಕೂಲಿ ಕೆಲಸ ಮಾಡಿಕೊಂಡಿದ್ದು 6 ತಿಂಗಳ ಹಿಂದೆ ಮದುವೆಯಾಗಿದ್ದ. ನಿನ್ನೆ ರಾತ್ರಿ ವಾಚಪೇಯಿ ಲೇಔಟ್ ನಲ್ಲಿ ಬೈಕ್ ಸಮೇತ ಬಿದ್ದಿದ್ದಾನೆ. ಆದರೆ ಅಪಘಾತವಲ್ಲವಿದು ಇದೊಂದು ಕೊಲೆಯಾಗಿದೆ.
ಮೃತ ರಾಜುವಿನ ಕಣ್ಣು ಗುಡ್ಡೆಗಳು ಹೊರಗೆ ಬಿದ್ದಿದೆ. ಅಪಘಾತ ಸಂಭವಿಸಿದ್ದರೆ ಕಣ್ಣುಗುಡ್ಡೆಗಳು ಹೊರಗೆ ಯಾಕೆ ಬರುತ್ತವೆ ಎಂದು ಕುಟುಂಬ ಅನುಮಾನ ವ್ಯಕ್ತಪಡಿಸಿದೆ. ಮೊಬೈಲ್ ಹೊರಗೆ ಕಟ್ಟೆ ಮೇಲೆ ಕಾಣಿಸಿಕೊಂಡಿದೆ. ಇದೆಲ್ಲಾ ಅನುಮಾನಕ್ಕೆ ಕಾರಣವಾಗಿದ್ದು, ಅಪಘಾತದ ಹೆಸರಿನಲ್ಲಿ ಇದೊಂದು ಕೊಲೆ ಎಂದು ಆತನ ಕುಟುಂಬ ಅನುಮಾನ ವ್ಯಕ್ತಪಡಿಸಿದೆ. ಪತಿ ಮೃತನಾದರೂ ಪತ್ನಿ ಸಾವಿಗೆ ಬಂದಿಲ್ಲದಿರುವುದು ಹಲವು ಅನುಮಾಕ್ಕೆ ಕಾರಣ ಎಂದು ಕುಟುಂಬ ಆರೊಪಿಸಿದೆ.
ಮತ್ತೊಂದು ಪ್ರಕರಣದಲ್ಲಿ ಸುರೇಶ್ ಎಂಬ 40 ವರ್ಷದ ಯುವಕ ಸುಬ್ಬಯ್ಯ ಮೆಡಿಕಲ್ ಆಸ್ಪತ್ರೆಯ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತರಾಗಿದ್ದಾರೆ.
إرسال تعليق