Surekha Muralidhar elected as Vice President-ಸಿನೀಯರ್ ಚೇಂಬರ್ ಅಧ್ಯಕ್ಷರಾಗಿ ಜಯೇಷ್, ಉಪಾಧ್ಯಕ್ಷರಾಗಿ ಸುರೇಖಾ ಮುರುಳೀಧರ್ ಆಯ್ಕೆ

 

ಅಂತರಾಷ್ಟ್ರೀಯ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಶಿವಮೊಗ್ಗದವರಾದ ಜಯೇಷ್ ಹಾಗೂ ರಾಷ್ಟಿçಯ ಉಪಾಧ್ಯಕ್ಷರಾಗಿ ಸುರೇಖ ಮುರಳೀಧರ್ ಆಯ್ಕೆ ಆಗಿದ್ದಾರೆ.


ಮಾರ್ಚ್ ೮ ಮತ್ತು ೯ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಆಶ್ರಯ ಸಭಾಭವನದಲ್ಲಿ ನಡೆದ 'ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ' ಸಂಸ್ಥೆಯ ೨೪ನೇ ರಾಷ್ಟ್ರೀಯ ಸಮಾವೇಶದಲ್ಲಿ ೨೦೨೫ - ೨೬ನೇ ಸಾಲಿಗೆ ರಾಷ್ಟ್ರೀಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


'ಉಡುಪಿ ಟೆಂಪಲ್ ಸಿಟಿ' ರವರ ಆತಿಥ್ಯದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟಿçÃಯ ಸಮಾವೇಶವು ಅತ್ಯಂತ ಯಶಸ್ವಿಯಾಗಿ, ವೈಭವಯುತವಾಗಿ ಸಂಪನ್ನಗೊAಡಿತು. ಇದೇ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಗೆ ೨೦೨೫ - ೨೬ನೇ ಸಾಲಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಮೂಲತಃ ಶಿವಮೊಗ್ಗದವರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಜನರಲ್ ಮ್ಯಾನೇಜರ್ ಜಯೇಶ್ ಹಾಗೂ ಹಾಗೂ ಶಿವಮೊಗ್ಗ ನಗರದ ಮಾಜಿ ಉಪ ಮಹಾಪೌರರಾದ ಸುರೇಖಾ ಮುರಳೀಧರ್ ಅವರು ರಾಷ್ಟ್ರೀಯ ಉಪಾಧ್ಯಕ್ಷರಾಗಿ ಚುನಾಯಿತರಾದರು. ನೂತನ ಪದಾಧಿಕಾರಿಗಳನ್ನು ಶಿವಮೊಗ್ಗ ಭಾವನ ಸದಸ್ಯೆಯರು ಹಾಗೂ ಶಿವಮೊಗ್ಗ ನಗರದ ವಿವಿಧ ವಿಭಾಗದ ಸದಸ್ಯರುಗಳು ಅಭಿನಂದಿಸಿದ್ದಾರೆ.

Post a Comment

أحدث أقدم