ಗೋರ ಬಂಜಾರ ಸಮುದಾಯದ ಹಕ್ಕು ಪ್ರಗತಿ ಪರಿವರ್ತನೆಗಾಗಿ ಜನಜಾಗೃತಿ ಸೇವಾ ರಥಯಾತ್ರೆ ಬೀದರ್ ನಿಂದ ಆರಂಭವಾಗಿದ್ದು ಮಾ.8 ರಂದು ಶಿವಮೊಗ್ಗ ತಲುಪಲಿದೆ ಎಂದು ಸಮಾಜದ ಕೆ.ಶಶಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿದ ಅವರು ಮೊದಲು ಹೊನ್ಬಾಳಿಯಿಂದ ಶಿಕಾರಿಪುರಕ್ಕೆ ತಲುಪಲಿದ್ದು ಸಂಸದ ರಾಘವೇಂದ್ರ ರಥಯಾತ್ರೆಯನ್ನ ಬರಮಾಡಿಕೊಳ್ಳಲಿದ್ದಾರೆ. ನಂತರ ಕುಂಚಿನಹಳ್ಳಿ ಮೂಲಕ ಶಿವಮೊಗ್ಗ ತಲುಪಲಿದೆ. ಶಾಸಕಿ ಶಾರದಾ ಪೂರ್ಯನಾಯ್ಕ್ ರಥಯಾತ್ರೆಯನ್ನ ಬರಮಾಡಿಕೊಳ್ಳಲಿದ್ದಾರೆ ಎಂದರು.
ಪ್ರೇಮ್ ಕುಮಾರ್ ಮಾತನಾಡಿ ನಂತರ ಮಾ.8 ರಂದು ನವುಲೆಯಲ್ಲಿರುವ ಬಂಜಾರ ಭವನದಲ್ಲಿ ಸಂಜೆ ಬಂಜಾರ ಸಭಾಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈರಥಯಾತ್ರೆ ಬೀದರ್ ನಿಂದ ಬೆಂಗಳೂರಿನ ವರೆಗೆ ತಲುಪಲಿದೆ. ಮಾ.9 ರಂದು ರಥಯಾತ್ರೆ ಶಿವಪ್ಪ ನಾಯಕ ವೃತ್ತದಿಂದ ಭದ್ರಾವತಿ ತಲುಪಲಿದೆ ಎಂದರು.
ಮೀಸಲಾತಿ, ಒಳಮೀಸಲಾತಿಯ ಬಗ್ಗೆ ಸಮಾಜಕ್ಕೆ ಜಾಗೃತಿಯಿಲ್ಲ. ಮತಾಂತರವೂ ಕೂಡ ಬಂಜಾರದಲ್ಲಿ ಸಾಮಾಜಿಕ ಪಿಡುಗಾಗಿದೆ. ವರದಕ್ಷಿಣೆ ಹೆಚ್ಚಾಗಿದೆ. ಇದರನ್ನ ಹೋಗಲಾಡಿಸಲುರಥಯಾತ್ರೆಯ ಮೂಲ ಉದ್ದೇಶವಾಗಿದೆ ಎಂದು ಶಶಿಕುಮಾರ್ ತಿಳಿಸಿದರು. ವಿದ್ಯಾರ್ಥಿ ಸಂಘದ ಗಿರೀಶ್ ಡಿ.ಆರ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
إرسال تعليق