ಶಿವಮೊಗ್ಗದಲ್ಲಿ ಮಲ್ಲಿಕಾರ್ಜುನ ಚಲನಚಿತ್ರಮಂದಿರದಲ್ಲಿ ಅಪ್ಪು ಸಿನಿಮಾ ರೀರಿಲೀಜ್ ಆಗಿದೆ. ರೀರಿಲೀಜ್ ಆದ ಬೆನ್ನಲ್ಲೇ ಅಪ್ಪು ಅಭಿಮಾನಿಗಳ ದಂಡೇ ಚಲನಚಿತ್ರ ಮಂದಿರಕ್ಕೆ ಹರಿದು ಬಂದಿದೆ.
ಅಪ್ಪು ಅಭಿಮಾನಿಗಳು ಡೊಳ್ಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸೋಮವಾರ ಅಪ್ಪು ಜನುಮ ದಿನದ ಪ್ರಯುಕ್ತ ಅಪ್ಪು ಸಿನಿಮಾ ನೋಡಲು ಬಂದವರಿಗೆ ಮತ್ತು ಸಾರ್ವಜನಿಕರಿಗೆ ವೆಜ್ ಬಿರಿಯಾನಿ ವಿತರಣೆ ಮಾಡಲಾಗುವುದು. ಮಾ.17 ರಂದು ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ನಡೆಯಲಿದ್ದು ಮೂರು ದಿನ ಮುಂಚಿತವಾಗಿ ಅವರ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.
23 ವರ್ಷದ ಹಿಂದೆ ರಿಲೀಸ್ ಆಗಿದ್ದ ಅಪ್ಪು ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಹಿಟ್ ಸಿನಿಮಾಗಳಲ್ಲಿ ಒಂದು. ಇಂದು ಬೆಂಗಳೂರಿನಲ್ಲಿ ವೀರೇಶ್ ಚಲನಚಿತ್ರದಲ್ಲಿ ರಿರಿಲೀಸ್ ಆಗಿದೆ. ಸಿನಿಮಾದ ಹೀರೋಯಿನ್ ರಕ್ಷಿತಾ ಪ್ರೇಮ್ ವೀಕ್ಷಣೆಗೆ ಆಗಮಿಸಿದ್ದು ವಿಶೇಷವಾಗಿತ್ತು.
ಶಿವಮೊಗ್ಗ ಅಪ್ಪು ಅಭಿಮಾನಿಗಳು ಮಧು. ಧನರಾಜ್. ಗಣೇಶ. ಪುರುಷೋತ್ತಮ್. ಕುಮಾರ್.ವೆಂಕಟೇಶ್.ಅಭಿ. ನವೀನ್. ಸತೀಶ್(ಚಿನ್ನು ). ಕಾರ್ತಿಕ್. ರಂಗನಾಥ್.ಮಾಲತೇಶ್ ಈ ಎಲ್ಲಾ ಸಂಭ್ರಮಾಚರಣೆಗೆ ವ್ಯವಸಸ್ಥೆ ಮಾಡಿದ್ದಾರೆ. ತಾಲಿಬಾನ್ ಅಲ್ಲೇ ಅಲ್ಲ ಎಂಬ ಹಾಡಿಗೆ ಅಭಿಮಾನಿಗಳು ಸಖತ್ ಸ್ಟೆಪ್ಸ್ ಹಾಕಿದ್ದಾರೆ.
إرسال تعليق