New dysp transfer-ನೂತನ ಡಿವೈಎಸ್ಪಿ ಆಗಿ ಅರವಿಂದ್ ಕಲಗುಜ್ಜಿ ವರ್ಗಾವಣೆ

 

ಖಾಲಿ ಇದ್ದ ಡಿವೈಎಸ್ ಪಿ ಸ್ಥಾನಕ್ಕೆ ಕಾರ್ಕಳದ ಡಿವೈಎಸ್'ಪಿಯನ್ನು ತೀರ್ಥಹಳ್ಳಿಗೆ ವರ್ಗಾವಣೆ ಮಾಡಲಾಗಿದೆ.


ತೀರ್ಥಹಳ್ಳಿಯಲ್ಲಿ ಈ ಹಿಂದೆ ಇದ್ದ ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರನ್ನು ತೀರ್ಥಹಳ್ಳಿಯಿಂದ ಬಾಗಲಕೋಟೆಗೆ ವರ್ಗಾವಣೆ ಮಾಡಿ ಸರ್ಕಾರ ಅದೇಶಿಸಿತ್ತು. ಸರಿ ಸುಮಾರು ಮೂರು ತಿಂಗಳ ನಂತರ ನೂತನ ಡಿವೈಎಸ್'ಪಿ ಆಗಮನ ಆಗುತ್ತಿದ್ದಾರೆ. 


ಕಾರ್ಕಳದಲ್ಲಿ ಡಿವೈಎಸ್'ಪಿ ಯಾಗಿದ್ದ ಅರವಿಂದ್ ಕಲಗುಜ್ಜಿ ಅವರನ್ನು ತೀರ್ಥಹಳ್ಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದ್ದು ಶೀಘ್ರದಲ್ಲಿ ತೀರ್ಥಹಳ್ಳಿಯಲ್ಲಿ ವೃತ್ತಿ ಆರಂಭಿಸಲಿದ್ದಾರೆ

Post a Comment

أحدث أقدم