ಮಹಿಳೆಯರು, ಪುರುಷರು ಹಾಗೂ ಅಪ್ರಾಪ್ತರು ಸೇರಿದಂತೆ ನಗರದ ವಿವಿಧ ಠಾಣ ವ್ಯಾಪ್ತಿಯಿಂದ ನಾಪತ್ತೆ ಪ್ರಕರಣಗಳು ದಾಖಲಾಗಿವೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ನಿವೃತ್ತ ನೌಕರ ತೀರ್ಥಪ್ಪ ಕಾಣೆಯಾಗಿದ್ದಾರೆ. ಹೇರ್ ಕಟಿಂಗ್ ಗೆ ಹೋಗಿ ಬರುವುದಾಗಿ ಹೇಳಿದ್ದ ತೀರ್ಥಪ್ಪನವರು ಮನೆಗೆ ವಾಪಾಸ್ ಆಗಿಲ್ಲ. ಇವರಿಗೆ 65 ವರ್ಷ ಕಳೆದಿದೆ.
ರಾತ್ರಿ 12-30 ಆದರೂ ಮಲಗದೆ ಇದ್ದ ಅಪ್ರಾಪ್ತ ಮಗನಿಗೆ ಮೊಬೈಲ್ ನೋಡದೆ ಮಲಗು ಎಂದು ತಾಯಿ ಹೇಳಿದಕ್ಕೆ ರಾತ್ರೋರಾತ್ರಿ ಮಗ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಓದಲು ಇಷ್ಟವಿಲ್ಲ. ನನ್ನ್ನ ಹುಡಕಬೇಡಿ ಎಂದು ಬರದಿಟ್ಟು ನಾಪಾತ್ತೆಯಾಗಿದ್ದಾನೆ.
ದುರ್ಗಿಗುಡಿಯ ಶನಿಮಹಾತ್ಮ ದೇಸ್ಥಾನದ ಬಳಿ ಕೆಲಸ ಮಾಡಿಕೊಂಡಿದ್ದ 18 ವರ್ಷದ ಆದಿತ್ಯ ಕೆಲಸಕ್ಕೆ ಹೋದವನು ವಾಪಾಸಾಗಿಲ್ಲ. ಇವರ ತಾಯಿ ಹೊಲಿಗೆಯಂತ್ರ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಸುನೀಲ್ ಎಂಬ ಯುವಕ ನಾಪತ್ತೆಯಾಗಿರುವುದಾಗಿ ತಾಯಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಾರ್ಕ್ ಬಡಾವಣೆಯ ಖಾಸಗಿ ಆಸ್ಪತ್ರೆಯಲ್ಲಿ ಪತಿಯನ್ನ ದಾಖಲಿಸಿದ್ದ 50 ವರ್ಷದ ಮಹಿಳೆ ದಿಡೀರ್ ಎಂದು ಕಾಣೆಯಾಗಿದ್ದಾರೆ. ಆಸ್ಪತ್ರೆಯ ಹಾಲ್ ನಲ್ಲಿ ಮಲಗಿದ್ದ ಮಹಿಳೆ ಮುಖ ತೊಳೆದುಕೊಂಡು ಬರುವುದಾಗಿ ಹೇಳಿ ಮಿಸ್ಸಿಂಗ್ ಆಗಿದ್ದಾರೆ. ಮಲ್ಲಮ್ಮ ಎಂಬ ಮಹಿಳೆಯ ಪತಿಗೆ ಲೋಬಿಪಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಸೆರಾಮಿಕ್ ಕೆಲಸಕ್ಕೆ ಹೋಗುತ್ತಿದ್ದ 25 ವರ್ಷದ ಯುವತಿ ನಾಪತ್ತೆಯಾಗಿದ್ದಾರೆ.
إرسال تعليق