ಕೊಲೆ ಆರೋಪಿ ನಗರದ ರೈಲ್ವೇ ಕಾಲೋನಿಯ ಅನಿಲ್‌ಕುಮಾರ್‌ನು ತಪ್ಪಿತಸ್ಥನೆಂದು ತೀರ್ಮಾನಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ನಾಯಕ ಎಂ ರವರು ಐಪಿಸಿ ಕಲಂ 302 ಅಡಿಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6 ತಿಂಗಳ ಶಿಕ್ಷೆ ವಿಧಿಸಿ ಆದೇಶಿಸಿ ತೀರ್ಪು ನೀಡಿರುತ್ತಾರೆ.
ದಿ: 14-01-2021 ರಂದು ರಾತ್ರಿ 11.15 ರ ಸಮಯದಲ್ಲಿ ಶಿವಮೊಗ್ಗದ ಬಾಪೂಜಿ ನಗರ 1ನೇ ಮುಖ್ಯ ರಸ್ತೆಯ ಗಂಗಾಮತ ಹಾಸ್ಟೆಲ್ ಹತ್ತಿರ ಸಂತೋಷ ಎಂಬಾತನು ಅವೆಂಜರ್ ಬೈಕಿನಲ್ಲಿ ಕುಳಿತಿದ್ದು ಆರೋಪಿ ಅನಿಲ್‌ಕುಮಾರ್ ಈತನೇ ಕಿರಣ ಎಂದು ತಪ್ಪಾಗಿ ಭಾವಿಸಿ ಮಚ್ಚಿನಿಂದ ಸಂತೋಷನ ಮುಖಕ್ಕೆ ಬಲವಾಗಿ ಹೊಡೆದಿದ್ದರಿಂದ ಸಂತೋಷನು ಬೈಕಿನಿಂದ ಕೆಳಕ್ಕೆ ಬೀಳುತ್ತಾನೆ. ಆಗ ಆತ ಕಿರಣ ಅಲ್ಲವೆಂದು ಗೊತ್ತಾಗಿಯೂ ಆ ವ್ಯಕ್ತಿಯನ್ನು ಬಿಟ್ಟರೆ ತನಗೆ ತೊಂದರೆ ಎಂದು ಯೋಚಿಸಿ ಪುನಃ ಅದೇ ಮಚ್ಚಿನಿಂದ ಸಂತೋಷನ ಮುಖ, ಕೈ, ಎದೆ ಮೇಲೆ ಬಲವಾಗಿ ಹೊಡೆದು ಕೊಲೆ ಮಾಡಿ ಹತ್ಯೆ ಮಾಡಿದ ಕೃತ್ಯವು ತನಿಖೆಯಲ್ಲಿ ಸ್ಪಷ್ಟವಾದ ಮೇರೆಗೆ ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಎಂ.ಎA ರವರು ಮಂಡಿಸಿದ ವಾದವನ್ನು ನ್ಯಾಯಾಲಯವು ಪುರಸ್ಕರಿಸಿ ಆರೋಪಿತನು ಐಪಿಸಿ ಕಲಂ 302 ಅಡಿಯಲ್ಲಿ ಎಸಗಿರುವ ಆರೋಪವು ದೃಢಪಟ್ಟಿರುತ್ತದೆ ಎಂದು ಪರಿಗಣಿಸಿ ಆರೋಪಿತನನ್ನು ತಪ್ಪಿತಸ್ಥನೆಂದು ತೀರ್ಮಾನಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಎಂ ಇವರು ಪ್ರಕರಣದ ಆರೋಪಿ ಅನಿಲ್‌ಕುಮಾರ್ ಬಿನ್ ಗುರಪ್ಪ ಈತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6 ತಿಂಗಳ ಶಿಕ್ಷೆ ವಿಧಿಸಿ ಜ.31 ರಂದು ಆದೇಶಿಸಿ ತೀರ್ಪು ನೀಡಿರುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.
إرسال تعليق