ಶಾಲಾ ಶುಲ್ಕ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯನ್ನ ಥಳಿಸಿ, ಜಾತಿ ನಿಂದನೆ ಮಾಡಿ ಆತನ ತಲೆ ಕೂದಲು ಕತ್ತರಿಸಿ ವಿರೂಪಗೊಳಿಸಿದ ಆರೋಪದ ಹಿನ್ನಲೆಯಲ್ಲಿ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಮಕ್ಕಳ ರಕ್ಷಣ ಕಾಯ್ದೆ ಪ್ರಕರಣ ದಾಖಲಾಗಿದೆ.
ಶಾಲಾ ಶುಲ್ಕ ಕಟ್ಟಿಲ್ಲದ ಕಾರಣ ಶಾಲೆಯ ಪ್ರಾಂಶುಪಾಲರು, ಪಿಇ ಟೀಚರ್, ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಯ ಪೋಷಕರು ಮಕ್ಕಳ ರಕ್ಷಣ ಕಾಯ್ದೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
ಶಾಲಾ ಶುಲ್ಕವನ್ನ ಕಟ್ಟಿದರೂ ಬಾಕಿಯಿದೆ ಎಂದು ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿಯ ಪೊಷಕರಿಗೆ ಪದೇ ಪದೇ ಫೋನ್ ಹಚ್ಚುತ್ತಿದ್ದರು. ಶುಲ್ಕಪಾವತಿಸಲು ಸಮಯ ಕೇಳಿದರೂ ನೀಡದೆ, ವಿದ್ಯಾರ್ಥಿ ಶಾಲೆಗೆ ಬಂದಾಗ ಅಡ್ಡಹಾಕಿ ಪ್ರಾಶುಪಾಲರ ಕೊಠಡಿಗೆ ಕರೆದುಕೊಂಡು ಹೋಗಿ ಜಾತಿನಿಂದನೆ ಮಾಡಿ, ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡಿರುವ ಆರೋಪ ಮಾಡಲಾಗಿದೆ.
ವಿದ್ಯಾರ್ಥಿಯ ತಲೆ ಕೂದಲನ್ನ ಕತ್ತರಿಸಿ ವಿರೂಪಗೊಳಿಸಿರುವ ಆರೋಪದ ಅಡಿ ಪೋಷಕರು ಜೆಜೆ ಕಾಯ್ದೆ ಅಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಮಲಗೊಪ್ಪದಲ್ಲಿರುವ ಜೈನ್ ಪಬ್ಲಿಕ್ ಶಾಲೆ ವಿರುದ್ಧ ದೂರು ದಾಖಲಾಗಿದೆ.
إرسال تعليق