ರಾಜ್ಯ ಸರ್ಕಾರದ ವೈಫಲ್ಯತೆ ಖಙಡಿಸಿ ನಾಳೆ ಜೆಡಿಎಸ್ ರಾಜ್ಯಾದ್ಯಂತ ಪ್ರತಿಭಟನೆ ಬಡೆಸುತ್ತಿದ್ದು, ಅದರಂತೆ ನಾಳೆ ಶಿವಮೊಗ್ಗದ ಜೆಡಿಎಸ್ ಘಟಕ ಪ್ರಯಿಭಟಿಸಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ರಾಜ್ಯ ಕಾಂಗ್ರೆಸ್ ಗ್ಯಾರೆಂಟಿಗಳನ್ನ ನೀಡುವಲ್ಲಿ ವಿಫಲವಾಗಿದೆ. ಗುತ್ತಿಗೆದಾರರ ಬಾಕಿ ಹಣ ಕೊಡಲು ಸರ್ಕಾರದ ಬಳಿ ಹಣವಿಲ್ಲ. ರೈತ ಆತ್ಮಹತ್ಯೆ ತಡೆಯುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಯಾವಾ ಅಧಿಕಾರಿಗಳು ಶಾಸಕರ ಮತ್ತು ಸಚಿವರ ಮಾತುಗಳನ್ನ ಕೇಳ್ತಾಯಿಲ್ಲ.ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಪಾಲಿಕೆ, ಜಿಪಂ ತಾಪಂ ಮಾಡಲಿಲ್ಲ. ಜನಪ್ರತಿನಿಧಿಗಳಿದ್ದರೆ ಕಷ್ಟಸುಖ ಹೇಳಿಕೊಳ್ಳಬಹುದು. 2,76000 ಹುದ್ದೆಗಳು ಖಾಲಿಯಿದೆ. ಹುದ್ದೆ ಭರ್ತಿ ಆಗದಿದ್ದರೆ ಪ್ರಗತಿಯಾಗೊಲ್ಲ ಎಂದರು.
ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಮಾ.7 ರಂದು ಬಜೆಟ್ ಇದೆ. ಬಜೆಟ್ ನಲ್ಲಿ ಬದುಕಲು ಅನುಕೂಲವಾಗುವ ಬಜೆಟ್ ಕೊಡಿ ಜನರ ಮೇಲೆ ಹೊರೆ ಏರಿಸುವ ಬಜೆಟ್ ಕೊಡಬೇಡಿ ಎಂದು ಒತ್ತಾಯಿಸಿದರು.
ನಾಳೆ ಬೆಳಿಗ್ಗೆ 11 ಗಂಟೆಗೆ ಜೆಡಿಎಸ್ ಪಕ್ಷದ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನೆ ನಡೆಯಲಿದೆ.
ಜಿಲ್ಲಾ ಯುವಘಟಕದ ಅಧ್ಯಕ್ಷ ಮಧುಸೂಧನ್ ಮಾತನಾಡಿ, ಬೆಂಗಳೂರಿನಲ್ಲಿ ನಿನ್ನೆ ನಿಖಿಲ್ ಅವರನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು ಅದರಂತೆ ಪ್ರತಿಭಟನೆ ನಡೆಯಲಿದೆ ಎಂದರು.
ಗ್ಯಾರೆಂಟಿ ಹಣ ಕೊಡಲು ಪ್ರತಿತಿಂಗಳು ದಿನಾಂಕ ನಿಗದಿ ಪಡಿಸಿ. ಅಭಿವೃದ್ಧಿ ಶೂನ್ಯವಾಗಿದೆ. ಯುವಕರಿಗೆ ಕೆಲಸವಿಲ್ಲದಂತೆ ಆಗಿದೆ. ಗಾಂಜಾ ಮತ್ತು ಇಸ್ಪೀಟ್ ಮಾಫೀಯ ನಡೆಯುತ್ತಿದೆ. ಭದ್ರಾವತಿಯಲ್ಲಿ ಎಂಪಿಎಂಕಾರ್ಖಾನೆ ಆರಂಭಿಸಲಾಗುತ್ತಿಲ್ಲ. ಜಿಲ್ಲೆ ಬಿಟ್ಟು ಬೇರೆಕಡೆ ಹರಿದುಹಂಚಿ ಹೋಗಿದ್ದಾರೆ. ಇವುಗಳನ್ನ ನಿಭಾಯಿಸಲು ರಾಜ್ಯ ಸರ್ಕಾರ ವಿಓಲವಾಗಿದೆ ಎಂದು ದೂರಿದರು
إرسال تعليق