ವಿದ್ಯಾನಗರದ ಮುಖ್ಯ ರಸ್ತೆ ಬಳಿ ಇರುವ ಹೊನ್ನಸಿರಿ ಲಾಡ್ಜ್ ಹತ್ತಿರ ಅಸ್ವಸ್ಥರಾಗಿ ಬಿದ್ದಿದ್ದ ಸುಮಾರು 35 ರಿಂದ 40 ವರ್ಷದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಾ.6 ರಂದು ಮೃತಪಟ್ಟಿರುತ್ತಾರೆ.
ಮೃತನು ಸುಮಾರು 5 ಅಡಿ 4 ಇಂಚು ಎತ್ತರ, ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಹೊಂದಿದ್ದು, ಕೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು-ಬಿಳಿ ಬಣ್ಣದ ಕೂದಲು 1/2 ಇಂಚು ಉದ್ದದ ಕಪ್ಪು-ಬಿಳಿ ಕುರುಚಲು ಗಡ್ಡ ಇರುತ್ತದೆ. ಮೈ ಮೇಲೆ ಹಸಿರು, ಕಪ್ಪು ಬಿಸ್ಕೇಟ್ ಬಣ್ಣದ ಅಡಿಡಾಸ್ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಸದರಿ ಮೃತ ಅನಾಮದೇಯ ಶವದ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆAದು ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ.
إرسال تعليق