ಶಿಕಾರಿಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ-A Hindu youth was attacked

 

ಶಿಕಾರಿಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಅನ್ಯಕೋಮಿನ ಯುವಕನಿಂದ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿದೆ. ಬೈಕ್ ಗೆ ದಾರಿ ಬಿಡುವ ವಿಚಾರದಲ್ಲಿ ಹಲ್ಲೆ ನಡೆದಿರುವುದಾಗಿ ತಿಳಿದು ಬಂದಿದೆ.


ಶಿಕಾರಿಪುರದ ಮಾಸೂರು ವೃತ್ತದಲ್ಲಿ ಹರ್ಷ ಎಂಬ ಯುವಕ ಬೈಕ್ ನಲ್ಲಿ ಹೋಗುವಾಗ ದಾರಿಗಾಗಿ ಧ್ವನಿ ಮಾಡಿದ್ದಾನೆ. ಈ ನಡುವೆ ಸಕ್ಲೈನ್ ಮತ್ತು ಹರ್ಷ ನ ನಡುವೆ ಮಾತಿಗೆ ಮಾತು ಬೆಳೆದಿದೆ. ಅಲ್ಲೇ ಇದ್ದ ಹಣ್ಣಿನ ಅಂಗಡಿಯಿಂದ ಚಾಕು ತಂದು ಸಕ್ಲೇನ್ ಹರ್ಷನ ಮೇಲೆ ದಾಳಿ ನಡೆಸಿದ್ದಾನೆ. 


ಹರ್ಷನ ತಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಹರ್ಷನಿಗೆ ಸ್ಟಿಚ್ ಹಾಕಿರುವುದಾಗಿ ತಿಳಿದು ಬಂದಿದೆ. ಶಿಕಾರಿಪುರ ಆಸ್ಪತ್ರೆಯಿಂದ ಶಿವಮೊಗ್ಗದ ಮೆಗ್ಗಾನ್ ಗೆ ಹರ್ಷನನ್ನ ಸಾಗಿಸಲಾಗಿದೆ. 


ಮುಂಜಾಗೃತ ಕ್ರಮವಾಗಿ ಶಿಕಾರಿಪುರ ಪೊಲೀಸರು ಕ್ರಮ ಜರುಗಿಸಿದ್ದಾರೆ. ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Post a Comment

أحدث أقدم