ಡೆಲಿವರಿ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಫೀಲ್ಡ್ ಎಕ್ಸಿಕ್ಯೂಟಿವ್ ನಿಂದ ದೋಖಾ ಆಗಿದೆ. ನಕಲಿ ಪಾರ್ಸಲ್ ಗಳನ್ನ ಡೆಲಿವರೆ ಮಾಡಿ ಕಂಪನಿಗೆ 80 ಸಾವಿರ ರೂ.ಗಳಿಗೂ ಹೆಚ್ಚು ಹಣ ನಷ್ಟ ಉಂಟುಮಾಡಿರುವುದು ಸಹ ಬೆಳಕಿಗೆ ಬಂದಿದೆ.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಡೆಲಿವೆರಿ ಲಿಮಿಟೆಡ್ ನ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ ಚಂದನ್ ಎಂಬಾತ ಸಂಸ್ಥೆಯಿಂದ ಬರುವ ವಸ್ತುಗಳನ್ನ ಗ್ರಾಹಕರಿಗೆ ಡೆಲಿವರಿ ಮಾಡಿ, ಡೆಲಿವೆರಿ ಮಾಡಿದ ವಸ್ತುಗಳ ಕವರ್ ಗಳನ್ನ ಸಂಗ್ರಹಿಸಿ, ಅದರಲಿ ನಕಲಿ ಫೊನ್, ಸೋಒಉ, ಕಟರ್ ಗಳನ್ನ ಇಟ್ಟು ನರು ಡೆಲಿವೆರಿ ಮಾಡುತ್ತಿರುವುದು ಸಂಸ್ಥೆಯ ಮೇಲಧಿಕಾರಿಗಳ ಗಮನಕ್ಕೆ ಬಂದಿರುತ್ತದೆ.
ಯದುಸುಂದರ್ ಎಂಬುವರು ಸೆಂಟ್ರಲ್ ಡಿ ಕಚೇರಿಯಲ್ಲಿ ಗ್ರಾಹಕರ ಪಾರ್ಸೆಲ್ ಗಳು ಬರುತ್ತಿದ್ದು, ಪಾರ್ಸೆಲ್ ಗಳ ಬದಲಾಗುತ್ತಿರುವುದು ತಿಳಿದು ಬಂದಿದೆ. ಈ ಬಗ್ಗೆ ವಿಚಾರ ಮಾಡಿದಾಗ ಚಂದನ್ ಎಂಬಾತನಿಂದ ಈ ಕೃತ್ತಗಳು ಬಹಿರಂಗ ಗೊಂಡಿದೆ.
ನಕಲಿ ವಸ್ತುಗಳನ್ನ ತುಂಬಿ ಅದನ್ನ ಗ್ರಾಹಕರಿಗೆ ನೀಡಿ ಪಾರ್ಸಲ್ ಬೆಲೆಯನ್ನ ಗ್ರಾಹಕರಿಂದ ಸ್ವೀಕರಿಸುತ್ತಿದ್ದ. ಇದು ಬೆಳಕಿಗೆ ಬಂದಿದೆ. ಯದುಸುಂದರ್ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಕಂಪನಿಗೆ ಮೋಸ ಮಾಡಿದ ಚಙದನ್ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
إرسال تعليق