ಮೇದಾರ ಕೇರಿಯಲ್ಲಿ ಗಗನಶ್ರೀ ಎಂಬ 22 ವರ್ಷದ ಮಹಿಳೆ ನೇಣುಬಿಗಿದುಕೊಂಡ ಸ್ಥಿತಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡನ ಮನೆಯ ಮೂವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಎಂದು ದೂರು ದಾಖಲಾಗಿದೆ.
ಪತಿ ಸಂದೀಪ, ಅತ್ತೆ ಸುಮಿತ್ರ ಹಾಗೂ ಪತಿಯ ಸಹೋದರ ಸಂತೋಷನ ವಿರುದ್ಧ ದೂರು ದಾಖಲಾಗಿವೆ. ಸೀಗೆಹಟ್ಟಿಯಲ್ಲಿರುವಾಗ ಗಗನಶ್ರೀಗೆ ಭರಮಪ್ಪ ಬೀದಿಯ ಯುವಕನೊಂದಿಗೆ ಪ್ರೀತಿ ಹುಟ್ಟಿತ್ತು. ಪ್ರೀತಿಸಿದ ಹುಡುಗನನ್ನ ಮನೆಯವರನ್ನ ಎದುರು ಹಾಕೊಕೊಂಡು ಗಗನಶ್ರೀ ಮದುವೆಯಾಗಿದ್ದಳು.
ಮದುವೆಯಾದ ಗಗನಶ್ರೀಗೆ ಮತ್ತು ಸಂದೀಪನಿಗೆ ಒಂದು ಮುದ್ದಾದ ಹೆಣ್ಣುಮಗುವೂ ಆಗಿತ್ತು. ಮತ್ತೊಂದು ಅಂಶವೆಂದರೆ ಗಗನಶ್ರೀ ಪದವೀಧರೆಯಾಗಿದ್ದಳು. ಪತಿಯೊಂದಿಗೆ ಮೇದಾರ ಕೇರಿಗೆ ಬಂದು ವಾಸವಾಗಿದ್ದಳು. ಇತ್ತೀಚೆಗೆ ಹಣಕ್ಕೆ ಪತಿ ಸಂದೀಪ ತುಂಬ ಗಲಾಟೆ ಮಾಡುತ್ತಿದ್ದ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಈ ವಿಷಯವನ್ನ ಅತ್ತೆ ಸುಮಿತ್ರ ಮತ್ತು ಸಹೋದರ ಸಂತೋಷನಿಗೆ ತಿಳಿಸಿದ ಗಗನಶ್ರೀಗೆ ಹಣ ತಂದು ಕೊಡು ಇಲ್ಲ ಸಾಯಿ ಎಂದು ಹೇಳಿದ್ದರು. ಮೂರು ಸಾವಿರ ಹಣವನ್ನ ಗಂಡನಿಗೆ ಸಾಲ ಮಾಡಿಕೊಂಡು ಗಗನಶ್ರೀ ತಂದುಕೊಟ್ಟಿದ್ದಳು. ಮೂರು ಸಾವಿರ ರೂ. ಹಣ ತಂದುಕೊಟ್ಟಿದ್ದಕ್ಕೆ ಹಣ ಕೊಟ್ಟವರು ಯಾವಾಗ ವಾಪಾಸ್ ಕೊಡ್ತೀರಾ ಎಂದು ದುಂಬಾಲು ಬಿದ್ದಿದ್ದರಂತೆ.
ನೇಣು ಬಿಗಿದುಕೊಂಡ ಹಿಂದಿನ ದಿನ ಸಂದೀಪ ಮತ್ತು ಗಗನಶ್ರೀ 11 ಗಂಟೆಯ ವರೆಗೆ ಗಲಾಟೆ ಮಾಡಿಕೊಂಡಿದ್ದಾರೆ. ನಂತರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಕ್ಕಪಕ್ದವರಿಗೆ ವಿಚಾರಿಸಿದಾಗ ಮನೆಯ ಹಿಂಬಾಗಿನಿಂದ ನೋಡಿದಾಗ ಸೀಲಿಂಗ್ ಗೆ ಸೀರೆಯಿಂದ ಗಗನಶ್ರೀ ನೇಣುಹಾಕಿಕೊಂಡಿರುವುದು ತಿಳಿದು ಬಂದಿದ್ದು ಸೀರೆ ಕಟ್ ಮಾಡಿರುವುದು ತಿಳಿದು ಬಂದಿದೆ ಎಂದು ಗಗನಶ್ರೀ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಅತ್ತೆ ಸುಮಿತ್ರ, ಗಂಡ ಸಂದೀಪ, ಸಹೋದರ ಸಂತೋಷ ಹೋಗಿ ಸಾಯಿ ಎಂದಿದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡು ನೇಣು ಬಿಗಿದುಕೊಂಡಿರುವುದಾಗಿ ಗಗನಶ್ರೀಯ ತಾಯಿ ವಿನೋಬನಗರದಲ್ಲಿ ದೂರುದಾಖಲಿಸಿದ್ದಾರೆ.
إرسال تعليق