Celebrating Madhu Bangarappa's Birthday occasion- ಸಚಿವ ಮಧು ಬಂಗಾರ್ಪನವರ ಹುಟ್ಟುಹಬ್ಬದ ಪ್ರಯುಕ್ತ ಗೋಶಾಲೆಗಳಲ್ಲಿ ಮೇವು ಹಂಚಿಕೆ ಮತ್ತು ದೇವರಿಗೆ ವಿಶೇಷ ಪೂಜೆ

 

ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಹುಟ್ಟು ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು. ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ದೇವರಿಗೆ ವಿಶೇಷ ಪೂಜೆ ನಡೆದರೆ, ಜ್ಞಾನೇಶ್ವರಿ ಗೋಶಾಲೆಯಲ್ಲಿ ಯುವ ಮುಖಂಡ ವಿನಯ್ ತಾಂದಲೆ ನೇತೃತ್ವದಲ್ಲಿ ಮೇವು ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.  


ಸಚಿವರ ಹುಟ್ಟು ಹಬ್ಬದ ಅಂಗವಾಗಿ ಯುವ ಮುಖಂಡರಾದ ವಿನಯ್ ತಾಂದಲೆ ಅವರ ನೇತೃತ್ವದಲ್ಲಿ ಅಬ್ಬಲಗೆರೆಯ ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಗೋವುಗಳಿಗೆ ಮೇವು ನೀಡುವುದರ ಮುಖಾಂತರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು 


ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಆರ್, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಕಲ್ಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾದ ಸುನಿಲ್, ಶಿವಾನಂದ, ಭಾಸ್ಕರ್, ಮಾಜಿ ಮಹಾನಗರ ಪಾಲಿಕೆ ಸದ್ಯಸರು ಆದ ಪಾಲಾಕ್ಷಿ, ಮಂಜುನಾಥ್ ನಾವುಲೆ, ಮಂಜುನಾಥ್ ಪುರಲೇ, ಗ್ಯಾರಂಟಿ ಯೋಜನ ಸದಸ್ಯರಾದ ಬಸವ, ಹಿಂದುಳಿದ ವರ್ಗದ ನಗರ ಅಧ್ಯಕ್ಷರಾದಂತ ಮೋಹನ್, ಅಲೆಮಾರಿ ನಿಗಮದ ಸದಸ್ಯರಾದ ಸಂದೀಪ್, ಯುವ ಮುಖಂಡರು ಆದ ಮಂಜುನಾಥ್, ಸ್ವರೂಪ್,ಪ್ರಮೋದ್, ಗಿರೀಶ್, ಹಾಲೇಶ್, ದರ್ಶನ್,ಭಾರತ್, ಚಂದನ್, ಸಚಿನ್,ವಿಜಯ್, ಅಶೋಕ, ಸುಜಿತ್, ಮಾನೇಶ್, ಹಾಗೂ ಇನ್ನೂ ಹಲವರಿದ್ದರು.


ಅದರಂತೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಞಿ ವೇಳೆ ಕಾಂಗ್ರೆಸ್ ನ ಹಿಂದುಳಿದ ಘಟಕದ ಸಂಯೋಜಕ ಜಿಡಿ ಮಂಜುನಾಥ್, ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್, ಭೋವಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರವಿಕುಮಾರ್, ಕಲಗೋಡು ರತ್ನಾಕರ್, ವಿಜಯಲಕ್ಷ್ಮಿ ಪಾಟೀಲ್ ಮೊದಲಾದವರು ಭಾಗಿಯಾಗಿದ್ದರು. 

Post a Comment

أحدث أقدم