ಅಹಿಂದ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಐಟಿಐ ಕಾಲೇಜು ಸ್ಥಾಪನೆ, ವಿದೇಶಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 20 ರಿಂದ 30 ಲಕ್ಷ ರೂ.ಗೆ ಏರಿಕೆ, ಅಲ್ಪಸಂಖತರ ಸರಳ ವಿವಾಹಕ್ಕೆ 50 ಸಾವಿರ ರೂ ಉಚಿತವಾಗಿ ನೀಡುವುದು.
100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋಟಿ ಅನುದಾನ. ವಕ್ಫ್ ಆಸ್ತಿಗಳ ಸಂರಕ್ಷಣೆ 150 ಕೋಟಿ ಅನುದಾನ. 2 ಕೋಟಿ ವರೆಗಿನ ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲೀಂರಿಗೆ ಮೀಸಲಾತಿ. ವಕ್ಫ್ ಖಾಲಿ ನಿವೇಶನದಲ್ಲಿ 16 ಮಹಿಳಾ ಕಾಲೇಜು ನಿರ್ಮಾಣ. ಉಳ್ಳಾಲದಲ್ಲಿ ಅಲ್ಪಸಂಖ್ಯಾತರಿಗೆ ಕಾಲೇಜು. ಅಲ್ಪಸಂಖ್ಯಾತರ 169 ಹಾಸ್ಟೆಲ್ ನಿರ್ಮಾಣ.
25 ಸಾವಿರ ವಿದ್ಯಾರ್ಥಿನಿಯರಿಗೆ ಸ್ವಯಂ ಕೌಶಲ್ಯ ತರಬೇತಿ ಕೇಂದ್ರ. ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ಹೀಗೆ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ಬಂಪರ್ ನೀಡಿರುವುದು ಬಿಜೆಪಿಯ ಆಕ್ಷೇಪಣೆಗೆ ಕಾರಣವಾಗಿದೆ.
ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಈ ಬಾರಿಯ ಬಜೆಟ್ ನಲ್ಲಿ ಅಹಿಂದ ಮಕ್ಕಳು ಇವರ ಕಣ್ಣಿಗೆ ಕಾಣದೆ, ತುಷ್ಟಿ ಕರಣಕ್ಕಾಗಿ ಮುಸಲ್ಮಾನ ಮಕ್ಕಳ ವಿದ್ಯಾಭ್ಯಾಸ ಭವಿಷ್ಯ ಯೋಚನೆ ಮಾಡುತ್ತಾ, ಮುಸಲ್ಮಾನರ ಕಲ್ಯಾಣಕ್ಕಾಗಿಯೇ ಬಜೆಟ್ ನ ಬಹುತೇಕ ಭಾಗ ಮಿಸಾಲಿಟ್ಟು ತಮ್ಮ ವೋಟ್ ಬ್ಯಾಂಕ್ ಅನ್ನು ಕಾಂಗ್ರೆಸ್ ಭದ್ರ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಆಕ್ಷೇಪಿಸಿದ್ದಾರೆ.
ಈ ಮೂಲಕ ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಅಹಿಂದ ವರ್ಗಕ್ಕೆ ಅನುಕೂಲವಾಗುವ, ಯಾವುದೇ ದೂರದೃಷ್ಟಿ ಇರದ ಅತ್ಯಂತ ಕಳಪೆ ಬಜೆಟ್ ಮತ್ತು ಜನಸಾಮಾನ್ಯರಿಗೆ ಸಾಲದ ಹೊರೆಯಾಗಿಸಿದ ಬಜೆಟ್ ಇದಾಗಿದೆ ಎಂದು ಜಗದೀಶ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ರಾಜ್ಯ ಬಿಜೆಪಿಯೂ ಸಹ ಬಜೆಟ್ ವಿರುದ್ಧ ಕೆಂಡಕಾರಿದ್ದು, ಇದು ಹಲಾಲ್ ಬಜೆಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದೆ
إرسال تعليق