ಆವಿನ ಹಳ್ಳಿಯ ಪಂಚಾಯತ್ ಅಭಿವೃದ್ದಿ ಅಧಿಕಾರಿಯ ಮತ್ತು ಸ್ಥಳೀಯ ವಾರ್ಡ್ ಸದಸ್ಯರ ನಿರ್ಲಕ್ಷ ದಿಂದ ಅವ್ಯವಸ್ಥೆಯ ಆಗರ ವಾಗುತ್ತಿ ರುವ ಅಂಬೇಡ್ಕರ್ ಭವನ ಮತ್ತು ಅದರ ಸುತ್ತ ಮುತ್ತಲಿನ ವಾತಾವರಣ ನಿರ್ಮಾಣವಾಗಿದೆ. ಸಾಮಾನ್ಯ ಜನರು ಮತ್ತು ಮಹಿಳೆಯರು ಇಲ್ಲಿ ಓಡಾಡಲು ಕಷ್ಟವಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನ ವೈರಲ್ ಮಾಡಲಾಗಿದೆ.
ಸಮುದಾಯ ಭವನದಲ್ಲಿ ಒಳಗಡೆ ಖಾಲಿ ವಾಟರ್ ಬಾಟಲ್ ಗಳು ಎಲ್ಲೆದರಲ್ಲಿ ಬಿದ್ದಿವೆ. ಮದ್ಯದ ಬಾಟೆಲ್ ಗಳು ಪತ್ತೆಯಾಗಿವೆ. ಪಿಡಿಒ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷತನ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಹರಿಬಿಡುತ್ತಿದ್ದಾರೆ.
ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳದ ಪಿಡಿಒ ವಿರುದ್ಧ ಮೇಲಧಿಕಾರಿಗಳು ಗಮನ ಹರಿಸಬೇಕು. ಊರಿನಲ್ಲಿ ಸ್ವಚ್ಚತೆ ಬಗ್ಗೆ ಒತ್ತುನೀಡಲು ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ
إرسال تعليق