A man missing ಮೆಡಿಕಲ್ ಶಾಪ್ ಗೆ ಹೋಗುವುದಾಗಿ ಮಿಸ್ಸಿಂಗ್

 

ನಗರದ ನವುಲೆ ತ್ರಿಮೂರ್ತಿನಗರ ವಾಸಿ ಪ್ರಿಯಾಂಕ ಎಂಬುವವರ ಪತಿ ಸಂದೀಪ್ ಎಸ್. ಬಿನ್ ಷಣ್ಮುಖಪ್ಪ ಎಂಬ 35 ವರ್ಷದ ವ್ಯಕ್ತಿ ಮಾ. 06 ರಂದು ಮನೆಯಿಂದ ಮೆಡಿಕಲ್ ಶಾಪ್‌ಗೆ ಎಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತ ಕೋಟೆ ರಸ್ತೆಯಲ್ಲಿರುವ ಬ್ಯೂಟಿ ಪಾರ್ಲರ್ ಕೆಲಸ ಮಾಡಿಕೊಂಡಿರುತ್ತಾರೆ.


ಈ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾರೆ.


ಈ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ

Post a Comment

أحدث أقدم