ಯೋಗರಾಜ್ ಭಟ್ ಅವರ ಮನದ ಕಡಲು ಸಿನಿಮಾ ಮಾ.28 ರಂದು ತೆರೆಕಾಣಲಿದ್ದು, ಸಿನಿಮಾ ಪ್ರಮೋಷನ್ ಗೆ ಸಿನಿಮಾ ತಂಡ ಶಿವಮೊಗ್ಗಕ್ಕೆ ಬಂದಿದ್ದರು.
ಯೋಗರಾಜ್ ಭಟ್, ರಾಶಿಕಾ ಶೆಟ್ಟಿ, ಸುಮುಖ ಶಿವಮೊಗ್ಗದ ಪ್ರೆಸ್ ಮೀಟ್ ನಡೆಸಿದ್ದಾರೆ. ಮುಂಗಾರುಮಳೆ ಮಲ್ಲಿಕಾರ್ಜುನ ಚಲನಚಿತ್ರ ಎರಡು ವರ್ಷ ಓಡಿದ ಸಿನಿಮಾ ಆಗಿತ್ತು. ಮುಂಗಾರು ಮಳೆ ರಿಲೀಸ್ ಆದಮೆಲೆ ಪ್ರವಾಸಕ್ಕೆ ಬಂದಿದ್ದೆ. ತಾಲೂಕಿನ ಪತ್ರಿಕಾರಂಗದವರೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದೆ ಎಂದರು.
20 ವರ್ಷದ ಹುಡುಗನಿಗಾಗಿ ಹುಡುಕಾಡಿದ್ದೆ. ಸುಮುಓನ ತಾಯಿ ಸಿನಿಮಾ ಟೈಟಲ್ ಗೆ ಕರೆ ಮಾಡಿದ್ದರು. ಆಗ ಊತ ನೆನಪಾಗಿ ಆತನ ಫೋಟೊ ಕೇಳಿದ್ದೆ. ಆಗ ಅನಿಸಿದ್ದು ಅವನೇ ಸರಿಯಾದ ಹುಡುಗ ಎಂದು ಪ್ರೊಡ್ಯೂಸರ್ ಕೃಷ್ಣಪ್ಪರಿಗೆ ತೋರಿಸಲಾಯಿತು. ಹುಡುಗ ನಾಯಕನಾಟನಾಗಿ ಫಿಟ್ ಆದ ಎಂದರು.
ಸಿನಿಮೆಟಿಕ್ ಅನುಭವವನ್ನ ಕೊಟ್ಟಿದ್ದು ಮುಂಗಾರು ಮಳೆ. ಮಳೆಯಲ್ಲಿ ತೊಯ್ದಿದ್ದಕ್ಕೆ ಅನುಭವ ನೀಡಿತ್ತು. ಮನದ ಕಡಲಿನಲ್ಲಿ ಮಹಾರಾಷ್ಟ್ರದಿಂದ ಕಾಸರಗೋಡು ವರೆಗೆ ಶೂಟಿಂಗ್ ನಡೆದಿದೆ. 18-20 ವರ್ಷದ ಹಿಂದಿನ ಮುಂಗಾರ ಮಳೆಯೆ ಇಂದಿನ ಮನದಕಡಲು ಸಿನಿಮಾ ಎಂದರು.
ರಾಶಿಕಾ, ಅಂಜಲಿ ಅವರ ಫರ್ಮೆನ್ಸ್ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದರು. ನಾಯಕನಟಿ ರಾಶಿಕಾ ಶೆಟ್ಟಿ ಮಾತನಾಡಿ, ಸಿನಿಮಾದಲ್ಲಿ ಲವ್ ಸ್ಟೋರಿ, ಕುಟುಂಬದವರು ಸೇರಿ ನೋಡುವ ಸಿನಿಮಾ ಎಂದರು.
ನಾಯಕ ನಟ ಸುಮುಖ ಮಾತನಾಡಿ, ಇದು ಎರಡನೇ ಹೋರಾಟ. ಬಜಾರ್ ನಲ್ಲಿ ಮಾ.28 ಕ್ಕೆ ಸಿನಿಮಾ ನೋಡಿ ಎಂದು ಘೋಷಣೆ ಮಾಡಿದ್ದೆ. ನಟನೆ ತುಂಬ ಇಷ್ಟ, ರಂಗಭೂಮಿಯಲ್ಲಿ ತಂದೆ ತಾಯಿಯವರ ಕಾಣಿಕೆ ಬಹಳವಿದೆ ಎಂದರು.
ತಂದೆಯ ಹೇಳಿಕೆಯನ್ನ ಸವಾಲು ಪಡೆದು ಮುಂಬೈಗೆ ಹೋಗಿದ್ದೆ. 8 ವರ್ಷ ಮುಂಬೈನ ರಂಗ ಮಂದಿರದಲ್ಲಿ ಕೆಲಸ ಮಾಡಿದ್ದೇನೆ ಈಗ ಕರ್ನಾಟಕಕ್ಕೆಬಂದು ಸಿನಿಮಾಮಾಡಿದ್ದೇನೆ. ಅದೇ ಮನದ ಕಡಲು. ವಿಶೇಷವಾಗಿ ಮೂಡಿ ಬಂದಿದೆ. ಹರಿಕೃಷ್ಣ ಸಂಗೀತ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ 6 ಹಾಡುಗಳಿವೆ ಎಂದರು.
100 ಸ್ಕ್ರೀನಿಂಗ್ ನಲ್ಲಿ ಬಿಡುಗಡೆ ಆಗಲಿದೆ. ಮುಂಗಾರು ಮಳೆ ಮೊದಲು 120 ಕೇಂದ್ರದಲ್ಲಿ ಬಿಡುಗಡೆ ಆಗಿತ್ತು. ನಂತ 300 ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆಯಾಯಿತು.
إرسال تعليق