ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆ ಇಂದು ನಗರದ ಬೈಪಾಸ್ ರಸ್ತೆಯಲ್ಲಿರುವ ತಾಹಾ ಸಭಾಂಗಣದಲ್ಲಿ ನಡೆಯಿತು, ಈ ಸಭೆಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ತಾಲ್ಲೂಕು ಸಮಿತಿ, ನಗರ ಸಮಿತಿಗಳು ಭಾಗವಹಿಸಿದ್ದರು.
ಈ ಸಭೆಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಕಾರ್ಯದರ್ಶಿಯಾದ ಅಂಗಡಿ ಚಂದ್ರು ಮತ್ತು ರಾಜ್ಯ ನಾಯಕರಾದ ಅಕ್ರಮ್ ಮೈಸೂರುರವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಕಳೆದ ಮೂರು ವರ್ಷಗಳ ಅವಧಿ ವರಧಿ ಪ್ರಸಾರ ಮಾಡಲಾಯಿತು ನಂತರ ನಡೆದ 2024-2027ರ ಅಂದರೆ ಮುಂಬರುವ ಮೂರು ವರ್ಷಗಳ ಆವಧಿಗೆ ನೂತನ ಜಿಲ್ಲಾ ಸಮಿತಿಯ ಆಯ್ಕೆ ಮಾಡಲಾಯಿತು.
ನೂತನ ಜಿಲ್ಲಾ ಸಮಿತಿ ವಿವರ.
ಜಿಲ್ಲಾಧ್ಯಕ್ಷರಾಗಿ - ಜೀಲಾನ್ ಖಾನ್, ಉಪಾಧ್ಯಕ್ಷರುಗಳಾಗಿ - ದೇವೇಂದ್ರ ಪಾಟಿಲ್ & ಸಲೀಂ ಖಾನ್, ಪ್ರಧಾನ ಕಾರ್ಯದರ್ಶಿಗಳಾಗಿ - ಇಮ್ರಾನ್ ಅಹ್ಮದ್ & ಅಬ್ದುಲ್ ಜಮೀರ್, ಕಾರ್ಯದರ್ಶಿಯಾಗಿ - ಮನ್ಸೂರ್ ಖಾನ್, ಖಜಾಂಚಿಯಾಗಿ - ರಹೀಂ ಖಾನ್, ಸಮಿತಿ ಸದಸ್ಯರಾಗಿ - ಇಸಾಕ್ ಅಹ್ಮದ್ & ಕಲೀಂ ಉಲ್ಲಾ ಆಯ್ಕೆಯಾಗಿದ್ದಾರೆ.
إرسال تعليق