ಚರ್ಚ್ ನ ಹುಂಡಿಕಾಸಿಗಾಗಿ ಮಾರಾಮಾರಿ!

 

ಚರ್ಚ್ ನ ಹುಂಡಿ ಕಾಸಿಗಾಗಿ ಮಾರಾಮಾರಿ ನಡೆದಿದೆ. ಭಾನುವಾರದ ಪ್ರಾರ್ಥನೆ ವೇಳೆ ಚರ್ಚ್ ಆವರಣದಲ್ಲಿ ಕೈ ಕೈ ಮಿಲಾಯಿಸುರುವ ಘಟನೆ ಶಿವಮೊಗ್ಗ ಸಮೀಪದ ಸದಾಶಿವ ನಗರದ ಹಕ್ಕಿಪಿಕ್ಕಿಕ್ಯಾಂಪ್ ನಲ್ಲಿ ನಡೆದಿದೆ. 


ಚರ್ಚ್ ನ ಭಕ್ತರ ಎರಡು ಗುಂಪುಗಳ ನಡುವೆ ಹೊಯ್ ಕೈ ನಡೆದಿರುವ ವಿಡಿಯೋ ಸಹ ವೈರಲ್ ಆಗಿದೆ. ಚರ್ಚ್‌ನ ಎರಡು ಟ್ರಸ್ಟ್ ನ ಗುಂಪಿನ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಎರಡು ಗುಂಪಿನ ಭಕ್ತರ ನಡುವಿನ ಕೈ ಕೈ ಮಿಲಾಯಿಸಿದ್ದಾರೆ. ಚರ್ಚ್ ನ ಹುಂಡಿ ಹಣದ ವಿಚಾರಕ್ಕೆ ಹೊಯ್ ಕೈ ನಡೆದಿದೆ. 


ಹುಂಡಿ ಹಣದ ಮೇಲೆ ಹಿಡಿತ ಸಾಧಿಸುವ ಸಂಬಂಧ ಹೊಯ್ ಕೈ ನಡೆದಿದೆ ಎನ್ನಲಾಗಿದೆ. ಹುಂಡಿ‌ ಕಾಸಿಗಾಗಿ ಹಳೆಯ ಮತ್ತು ಹೊಸ ಟ್ರಸ್ಟ್ ಸದಸ್ಯರ ನಡುವೆ ಭಿನ್ಬಾಭಿಪ್ರಾಯ ಮೂಡಿದ್ದರಿಂದ ಈ ಗಲಾಟೆ ನಡೆದಿದೆ. 


ಭಾನುವಾರದ ಪ್ರಾರ್ಥನೆ ವೇಳೆ ಮಾತಿನ‌ ಚಕಮಕಿ ನಡೆದಿದೆ. ಹೊರಗಿನವರೇ ಇರುವ ಟ್ರಸ್ಟ್ ನವರು ಬಂದು ಹುಂಡಿಯ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪವಾಗಿದೆ. 


ಗುಂಪಿನ ಸದಸ್ಯರು ಪರಸ್ಪರ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕೈ‌ ಕೈ ಮಿಲಾಯಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 


ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹಕ್ಕಿಪಿಕ್ಕಿ ಕ್ಯಾಂಪ್ ನಲ್ಲಿ ಪೊಲೀಸ್ ನಿಯೋಜನೆ

Post a Comment

أحدث أقدم