ಆರ್ ಟಿಒ ಅಧಿಕಾರಿಗಳ ಗುದ್ದಾಟ, ಎಫ್ಐಅರ್ ದಾಖಲು

 

ಆರ್ ಟಿಒ ಕಚೇರಿಯಲ್ಲಿ ಅಧಿಕಾರಿಗಳೆ ಕಚ್ಚಾಡಿಕೊಂಡು ದೂರು ದಾಖಲಿಸಿರುವ ಘಟನೆ ವರದಿಯಾಗಿದೆ. 


ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ ಮಂಜುನಾಥ ಎಸ್. ಪಿ. ಎಂಬವರು ತಮ್ಮ ಮೇಲೆ ಆರ್‌ಟಿಒ ಹಿರಿಯ ನಿರೀಕ್ಷಕ ಮಲ್ಲೇಶಪ್ಪ ಪಿ.ಎನ್. ಹಲ್ಲೆ ಮಾಡಿ ನಿಂಧಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಕಳೆದ ಮಂಗಳವಾರ ಸಂಜೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಹಿರಿಯ ನಿರೀಕ್ಷಕ ಮಲ್ಲೆಶಪ್ಪರವರು ನಿಂಧಿಸಿದ್ದಷ್ಟೆ ಅಲ್ಲದೆ ಆ ಬಳಿಕ ಕಚೇರಿಗೆ ಬಂದು ಅಧಿಕಾರಿ ಮಂಜುನಾಥ್‌ರ ಕುಳಿತಿದ್ದ ಕುರ್ಚಿಯನ್ನು ಎಳೇದಾಡಿ ಎದೆ, ಕುತ್ತಿಗೆ ಹಾಗೂ ಬೆನ್ನಿಗೆ ಹೊಡೆದಿದ್ದಾರೆ. ಅಷ್ಟೆ ಅಲ್ಲದೆ ತಮ್ಮ ಬೂಟನ್ನು ಅಧಿಕಾರಿಯತ್ತ ಬಿಸಾಡಿ ನಿಂಧಿಸಿದ್ದಾರೆ. ಈ ವೇಳೆ ಅಲ್ಲಿದ್ದ ಇತರೇ ಸಿಬ್ಬಂದಿ ಮಲ್ಲೇಶಪ್ಪರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.


ಈ ಘಟನೆಗೆ ಸಿಸಿ ಕ್ಯಾಮರಾದ ದೃಶ್ಯಗಳು ಸಾಕ್ಷ್ಯವಾಗಿದ್ದು, ಅದನ್ನು ಪ್ರಭಾವ ಬಳಸಿ ಡಿಲೀಟ್‌ ಮಾಡುವ ಸಾಧ್ಯತೆ ಇದೆ ಎಂದು ಸಹ ಅಧಿಕಾರಿ ಜಯನಗರ ಪೊಲೀಸ್ ಠಾಣೆಯಲ್ಲಿ ಮಂಜುನಾಥ್‌ ದೂರಿದ್ದಾರೆ.

Post a Comment

أحدث أقدم