ಕಳೆದ ಒಂದು ತಿಂಗಳಿಂದ ಭದ್ರಾವತಿ ಹೆಚ್ಚಿನ ಸುದ್ದಿಯಾಗುತ್ತಿದೆ ಎಂದು ಭದ್ರಾವತಿ ಹಿತರಕ್ಷಣ ವೇದಿಕೆ ಸುರೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಸಮರ್ಥ ಎಙೆಲ್ ಎ, ಸರ್ವಾಧಿಕಾರಿಯ ಮಕ್ಕಳು, ನಿರುಪದ್ರವ್ಯದ ಅಧಿಕಾರಿಗಳಿಂದ ಭದ್ರಾವತಿಯಲ್ಲಿ ಕಾನೂನು ಸುವ್ಯವಸ್ಥೆಯಾಗಿದೆ.
ಅನಿಲ್ ಮತ್ತು ಸಹೋದರರು ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಪೊಲೀಸ್ ಎಂಟ್ರಿ ಆಗಿದೆ.ಠಾಣೆಗೆ ಕರೆಯಿಸಿ ಹೊಸಮನೆ ಪಿಎಸ್ಐ ಕೃಷ್ಣ ಕುಮಾರ್ ಮಾನೆ ಹಲ್ಲೆ ನಡೆಸಿದ್ದಾರೆ. ಹಣಕಿತ್ತುಕೊಂಡು ಕಳುಹಿಸಿದ್ದಾರೆ.
ಈ ಸುದ್ದಿಯಾಗುತ್ತಿದ್ದಂತೆ ರೌಡಿಗಳನ್ನ ಕರೆಯಿಸಿ ಅನಿಲ್ ಸಹೋದರಿಗೆ ದೂರು ವಾಪಾಸ್ ಪಡೆಯಲು ಒತ್ತಡ ಹಾಕಿದ್ದಾರೆ. ದೂರು ದಾಖಲಾಗಲು ಬಿಸ್ತಾ ಇಲ್ಲ. ರಿಪಬ್ಲಿಕ್ ಆಫ್ ಭದ್ರಾವತಿ ಮುಂದುವರೆದಿದೆ. ಎಸ್ಪಿಗೆ ದೂರು ನೀಡಿದರೂ ಕ್ರಮ ಆಗಿಲ್ಲ ಎಂದು ದೂರಿದರು.
ಸರ್ಕಲ್ ಇನ್ ಸ್ಪೆಕ್ಟರ್ ಗೆ ತಿಳಿಸಿದರೆ ಸಾಹೇಬರಿಗೆ ಕೊಟ್ಟಿದ್ದೀರ ಅವರು ನಮಗೆ ತಿಳಿಸುತ್ತಾರೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ. ಯಾರದು ಸಾಹೇಬರು ಎನ್ನುವುದು ಸ್ಪಷ್ಟವಾಗಬೇಕಿದೆ. ಸಾಹೇಬರು ಎಂದರೆ ಪೊಲೀಸರ ಭಾಷೆಯಲ್ಲಿ ಬೇರೆಯಾಗಿದೆ ಎಂದು ನೊಂದ ವ್ಯಕ್ತಿ ಅನಿಲ್ ದೂರಿದರು.
ಅಟ್ರಾಸಿಟಿ ಪ್ರಕರಣ ದುರುಪಯೋಗವಾಗಬೇಕಿದೆ. ರಾಷ್ಟ್ರೀಯ ಹಬ್ಬಕ್ಕೆ ಶಾಸಕರು ಬರಬೇಕು ಆದರೆ ಅವರ ಮಕ್ಕಳು ಹಾಜರಾಗುತ್ತಾರೆ. ಯಾರನ್ನ ಕೇಳಬೇಕು ಗೊತ್ತಾಗುತ್ತಿಲ್ಲ. ಸುದ್ದಿಗೋಷ್ಠಿ ನಡೆಸಿದರೆ ದೂರು ದಾಖಲಾಗುತ್ತದೆ. ವಿಐಎಸ್ ಎಲ್ ನಲ್ಲಿ ಉತ್ಸವ ನಡೆಸುವುದಾಗಿ ಪತ್ರಿಕೆಯಲ್ಲಿ ಪ್ರಕಟಿಸಿದರೆ ದೂರು ದಾಖಲಾಯಿತು ಎಂದು ಸುರೇಶ್ ತಿಳಿಸಿದರು.
ಮೂರು ಪ್ರಕರದಲ್ಲಿ ಬಸವೇಶ್ ಆರೋಪಿ, ಎಸ್ಪಿ ಒಂದು ಕಾರ್ಯಕ್ರಮದಲ್ಲಿ ಈ ಆರೋಪಿಗಳನ್ನ ಕರೆಯಿಸಿ ಒಂದಿ ಕಾರ್ಯಕ್ರಮದಲ್ಲಿ ಸನ್ಮಾನಿಸಿತ್ತಾರೆ. ಸಜ್ಜನರು ವಾಸ ಮಾಡುವ ಪರಿಸ್ಥಿತಿಯಿಲ್ಲದಂತಾಗಿದೆ. ಉದ್ಯೋಗವಿಲ್ಲದ ಭದ್ರಾವತಿಯಲ್ಲಿ 6 ತಿಂಗಳಲ್ಲಿ ಎಂಪಿಎಂ ಆರಂಭಿಸುವುದಾಗಿ ಹೇಳಿದ್ದ ಶಾಸಕರು ವಿಫಲರಾಗಿದ್ದಾರೆ. ಭದ್ರಾವತಿ ವೃದ್ಧಾಂಶ್ರಮವಾಗಿದೆ. ಗಾಂಜಾ, ಓಸಿಯ ತವರು ಮನೆ ಭದ್ರಾವತಿಯಾಗಿದೆ ಎಂದರು.
ಪಿಎಸ್ ಐರನ್ನ ಸಸ್ಪೆಂಡ್ ಮಾಡದಿದ್ದರೆ ಭದ್ರಾವತಿಯಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದು ದೀಪಕ್ ತಿಳಿಸಿದರು.
إرسال تعليق