ಅಟಲ್ ಬಿಹಾರಿ ವಾಜಪೇಯಿ ಅವರ ಶತಮಾನೋತ್ಸವ ಕಾರ್ಯಕ್ರಮವನ್ನ ನಡೆದಿದ್ದು ಜ.14 ರಿಂದ ಫೆ.14 ರ ವರೆಗೆ ಆಚರಿಸಲಾಗಿದೆ. ಫೆ. 14 ರಿಂದ ಮಾ.14 ರವರೆಗೆ ವಿರಾಸತ್ ಎಂಬ ಹೆಸರಿನ ಅಡಿ ನಡೆಸಲಾಗುತ್ತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ದೊಡ್ಡ ಆರ್ಥಿಕ ವ್ಯವಸ್ಥೆ, ಬಲಿಷ್ಠ ಭಾರತವಾಗಿ ನಮ್ಮ ದೇಶ ಬೆಳೆದಿದೆ. ಅಟಲ್ ಜಿಯವರ ವಿಡಿಯೋ, ಫೋಟೊ ತುಣುಕನ್ನ ಇಟ್ಟುಕೊಂಡವರು, ಕವನ ಬರೆದವರು, ಪತ್ರಬರೆದವರ ಮನೆಗೆ ನಾವುಗಳು ಭೇಟಿ ನೀಡಿ ಅವರನ್ನ ಸನ್ಮಾನಿಸಲಾಗುವುದು ಎಂದರು.
ಅಂತಹವರನ್ನ ಗುರುತಿಸಿ ಸನ್ಮಾನ, ವಾಜಪೇಯಿರವನ್ನ ಸನ್ನಾನ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಫೆ.14 ರಿಂದ ಮಾ.14 ರ ವರೆಗೆ ವಿರಾಸತ್ ಸಮ್ಮೇಳನ್ನ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಟಲ್ ವಿಚಾರವನ್ನ ವಿರಾಸತ್ ಸಮ್ನೇಳನದಲ್ಲಿ ಹಂಚಿಕೊಳ್ಳಲಾಗುವುದು.
ಡಿ.25 ಸುಶಾನ ದಿನಾಚರಣೆ ಎಂದು ಅಟಲ್ ಜಿ ಅವರ ಹುಟ್ಟುಹಬ್ಬವನ್ನ ಆಚರಿಸುತ್ತಿದೆ. ಸೋಷಿಯಲ್ ಮೀಡಿಯದಲ್ಲಿ ಅಟಲ್ ಜಿ ಫೊಟೊವನ್ನ ಫೆ.9 ರಿಂದ ಆರಂಭವಾಗಿದೆ. ಎಲ್ಲಿ? ಮತ್ತು ಹೇಗೆ ಎಂಬ ವಿವರಣೆಯೊಂದಿಗೆ ನಡೆಯಲಿದೆ.
ರಾಜ್ಯದ ನಾಯಕರು ಅವರ ವ್ಯಕ್ತಿತ್ವವನ್ನ ತಿಳಿದುಕೊಂಡಿದ್ದರೆ ಒಳ್ಳೆಯದು ಎಂದ ಅವರು ನಾನು ಅವರಿಗೆ ಹೇಳುವಷ್ಟು ದೊಡ್ಡವಳಲ್ಲ ಎಂದು ಇತ್ತೀಚೆಗೆ ನಡೆದ ರಾಜಕೀಯ ಬೆಳೆವಣಿಗೆ ಬಗ್ಗೆ ಮಾರ್ಮಿಕವಾಗಿ ನುಡಿದರು.
إرسال تعليق