ನಾಳೆ ಸಂವಿದಾನ ರಕ್ಷಕ ಅಭಿಯಾನ ನಡೆಸುತ್ತಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಅಭಿಯಾನವನ್ನ ಹಿಂದುಳಿದ ವರ್ಗಗಳ ವಿಭಾಗಪರಿಶಿಷ್ಟ ಜಾತಿ ವಿಭಾಗ, ಪರಿಶಿಷ್ಟ ಪಂಗಡ ವಿಭಾಗ, ಅಲ್ಪಸಂಖ್ಯಾತರ ವಿಭಾಗಗಳ ವತಿಯಿಂದ ಹಮ್ಮಿಕೊಂಡಿದ್ದೇವೆ. ಈ ಹಿಂದೆ ಬೆಳಗಾವಿಯಲ್ಲಿ ಜೈ ಬಾಪು ಜೈ ಭೀಮ್ ಜೈ ಸಂವಿಧಾನ್ ಕಾರ್ಯಕ್ರಮ ಮಾಡಿದ್ದೇವೆ ಎಂದರು.
ಆ ಕಾರ್ಯಕ್ರಮವನ್ನು ಗಾಂಧೀಜಿ ಬೆಳಗಾವಿಗೆ ಬಂದು ನೂರು ವರ್ಷವಾದ ನೆನೆಪಿಗೆ ಹಮ್ಮಿಕೊಂಡಿದ್ದೆವು. ಈಗ ಸಂವಿದಾನ ರಕ್ಷಕ ಅಭಿಯಾನ ನಡೆಸಲು ಮುಖ್ಯವಾದ ಉದ್ದೇಶವೊಂದಿದೆ. ಅದೇನೆಂದರೆ ಈ ಹಿಂದೆ ಕೇಂದ್ರ ಸರ್ಕಾರದ ಗೃಹ ಮಂತ್ರಿಗಳು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದರು. ಅಂಬೇಡ್ಕರ್ ಸಂವಿಧಾನವನ್ನು ಜಾರಿಗೆ ತಂದ ಮಹಾನ್ ನಾಯಕ ಎಂದರು.
ಹಾಗಾಗಿ ಈ ಸಂವಿಧಾನ ಉಳಿಯಬೇಕು ಅಂಬೇಡ್ಕರ್ ಸಂವಿಧಾನ ರಕ್ಷಣೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ಒಂದು ವರ್ಷಗಳ ಕಾಲ ದೇಶದಾದ್ಯಂತ ಎಲ್ಲಾ ಕಡೆ ನಡೆಯುತ್ತದೆ ಎಂದರು.
ನಾಳೆ ಬೆಳಿಗ್ಗೆ 9: 30 ಕ್ಕೆಗಾಂಧಿ ಪಾರ್ಕ್ನಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ನಂತರ ಮಹಾನಗರ ಪಾಲಿಕೆಯಲ್ಲಿರುವ ಅಂಬೇಡ್ಕರ್ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುತ್ತೇವೆ. ಅಲ್ಲಿಂದ ನಮ್ಮ ಮೆರವಣಿಗೆ ಶಿವಪ್ಪನಾಯಕ ವೃತ್ತ ಅಮೀರಾಮ ಸರ್ಕಲ್ ಗೋಪಿ ವೃತ್ತದ ಮೂಲಕ ಸಾಗುತ್ತದೆ
11:30ಕ್ಕೆಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆರಂಭವಾಗುತ್ತದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವರಾದ ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಎಲ್ಲಾ ನಾಯಕರು ಶಾಸಕರು ಭಾಗವಹಿಸುತ್ತಾರೆ. ಈ ಮೆರವಣಿಗೆಯಲ್ಲಿ ಕಾರ್ಯಕರ್ತರು ಹೆಚ್ಚಾಗಿ ಸೇರಬೇಕು ಎಂದರು.
ಸಂವಿಧಾನ ರಕ್ಷಣೆಗೆ ಹೆಚ್ಚಿನ ಕಾರ್ಯಕರ್ತರು ಕೈಜೋಡಿಸಬೇಕು. ಕೆಪಿಸಿಸಿ ಯ ಆದೇಶದ ಪ್ರಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಕೆ ಜಿ ವೆಂಕಟೇಶ್ ಸಂವಿದಾನ ರಕ್ಷಣೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಯೂತ್ ಕಾಂಗ್ರೆಸ್ ಎಲೆಕ್ಷನ್ ಲೋಪದ ವಿಚಾರ
ಚುನಾವಣೆಯಲ್ಲಿ ಸೋತವರು ಲೋಪದ ಬಗ್ಗೆ ಮಾತನಾಡುತ್ತಾರೆ. ನಾವೆಲ್ಲ ನೇರವಾಗಿ ಹಸ್ತಕ್ಷೇಪ ಮಾಡಬಾರದು ಎಂದು ಹೈಕಮಾಂಡ್ ನಿಂದ ಸೂಚನೆ ಬಂದಿತ್ತು. ಹಾಗಾಗಿ ನಾವು ಆ ಎಲೆಕ್ಷನ್ ನಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಎಂದರು.
ಮೂಡಾ ಹಗಣದಲ್ಲಿ ಇಎಂ ಸಿದ್ದರಾಮಯ್ಯಗೆ ಕೋರ್ಟ್ ಕ್ಲೀನ್ ಚಿಟ್ ಕೊಟ್ಟ ವಿಚಾರ
ಬಿಜೆಪಿಯವರು ಮೂಡ ಹಗರಣದ ಬಗ್ಗೆ ಯಾವಾಗಲೂ ವಿರೋಧ ಮಾಡ್ತಾ ಇದ್ದಾರೆ. ಅವರು ಇರುವುದೇ ವಿರೋಧ ಮಾಡಲೆಂದು. ಮನಸ್ಸು ಮಾಡಿದ್ದರೆ ಸಿ ಎಂ ಅವರು ಸಾವಿರ ಸೈಟ್ಗಳನ್ನು ಅಕ್ರಮ ಮಾಡ ಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಬಿಜೆಪಿಯವರು ಬೇರೆಯವರ ಎಲೆಯಲ್ಲಿ ನೊಣ ಬಿದ್ದಿದ್ದನ್ನ ಹೇಳುತ್ತಾರೆ. ಅವರ ಎಲೆಯಲ್ಲಿ ಹೊಲಸು ಬಿಡಿದ್ದರೂ ನೋಡುವುದಿಲ್ಲ ಎಂದರು.
إرسال تعليق