ಕೋಟೆ ಮಾರಿಕಾಂಬ ದೇವಿಗೆ ಫಲಪುಷ್ಪ ಅಲಂಕಾರ, ಕೋಟೆ ಆಂಜನೇಯ ಸ್ವಾಮಿಯ ರಥೋತ್ಸವ


 ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿರುವ ಶ್ರೀಕೋಟೆ ಆಂಜನೇಯಸ್ವಾಮಿ ದೇವಾಲಯ (temple) ಅತ್ಯಂತ ಪ್ರಸಿದ್ಧವಾಗಿದೆ. ಮುಂಭಾಗದಲ್ಲಿ ವಿಶಾಲವಾದ ಪಟ್ಟಣ ಪ್ರದೇಶ,ಹಿಂಭಾಗದಲ್ಲಿ ಪವಿತ್ರ ತುಂಗಾ ನದಿ, ಶಿವಪ್ಪ ನಾಯಕನ ಕಾಲದಕೋಟೆ ಇತ್ಯಾದಿಗಳ ಕಾರಣ ಈ ದೇವಾಲಯ ಪ್ರಸಿದ್ಧವಾಗಿದೆ. ಭಕ್ತರ ಅಭೀಷ್ಠಗಳನ್ನು ಶೀಘ್ರ ನೆರವೇರಿಸಿ ಸಂಕಷ್ಟ ಪರಿಹರಿಸುವ ದೇವರು ಎಂದೇ ಹೆಸರಾಗಿದೆ.


ಕೋಟೆ ಶ್ರೀ ಸೀತಾರಾಮಾಂಜನೇಯ ದೇಗುಲದಿಂದ ಎಸ್‌ಪಿಎಂ ರಸ್ತೆ ಮೂಲಕ, ಗಾಂಧಿ ಬಜಾರ್‌ವರೆಗೆ ರಥೋತ್ಸವ (rathotsava) ನಡೆಯಿತು. ನಂತರ ಅದೇ ಮಾರ್ಗವಾಗಿ ರಥೋತ್ಸವ ಮರಳಿದ್ದು, ಕೋಟೆ ಶ್ರೀ ಮಾರಿಕಾಂಬ ದೇವಿ ದೇಗುಲದ ಬಳಿ ಪೂಜೆ ಸಲ್ಲಿಸಲಾಯಿತು. ರಾತ್ರಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಕಲಾ ತಂಡಗಳು ರಥೋತ್ಸವದಲ್ಲಿ ಭಾಗವಹಿಸಿದ್ದವು.


ಕೋಟೆ ಮಾರಿಕಾಂಬಗೆ ಫಲಪುಷ್ಪ ಅಲಂಕಾರ

ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಿಗೆ ಹುಣ್ಷಿಮೆ ಪ್ರಯುಕ್ತ ಫಲಪುಷ್ಪ ಅಲಂಕಾರ ಮಾಡಲಾಗಿದೆ. ಭರತ ಹುಣ್ಣಿಮೆ ಪ್ರಯುಕ್ತ ವಿವಿಧ ಬಗೆಯ ಹಣ್ಣನಿಂದ ದೇವಿಗೆ ಅಲಂಕರಿಸಲಾಗಿದೆ. 

Post a Comment

أحدث أقدم