ಮದ್ಯವ್ಯಸನದಿಂದ ಹೊರಗೆ ಬರಲು ಆಗದೆ ಆತ್ಮಹತ್ಯೆ

 

ಶಿವಮೊಗ್ಗದಲ್ಲಿ ಎರಡು ದಿನಗಳಲ್ಲಿ ಮೂರು ಅಸ್ವಭಾವಿಕ ಸಾವುಗಳು ಸಂಭವಿಸಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಯ ರಾಮಗಿರಿ ನಿವಾಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಮೆಗ್ಗಾನ್ ಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದು ಪ್ರಮುಖವಾಗಿದೆ.


ಹನುಮಂತಪ್ಪ ಆರ್ ಎಂಬುವರು ರಾಮಗಿರಿಯ ನಿವಾಸಿಯಾಗಿದ್ದು, ಮದ್ಯ ಸೇವನೆಯಿಂದ ಉಂಟಾದ ಜಾಂಡೀಸ್ ಕಾಯಿಲೆ ಹಿನ್ನಲೆಯಲ್ಲಿ ಚಟ ಬಿಡಲು ಸಾಧ್ಯವಾಗದೆ ಮನೆಯ ಹಿಂಬದಿಯ ಮರಕ್ಕರ ಡ್ರಿಪ್ ವಯರ್ ಗಳನ್ನ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  


ಹನುಮಂತಪ್ಪನಿಗೆ ಕುಡಿಯುವ ಚಟ ಹೆಚ್ಚಾಗಿದ್ದು, ಮದ್ಯಪಾನ ಬಿಡದಿದ್ದರೆ ಜಾಙಡೀಸ್ ತೊಂದರೆಯಾಗುತ್ತೆ ಎಂದು ವೈದ್ಯರು ತಿಳಿಸಿದ್ದರು. ಹನುಮಂತಪ್ಪ ಮದ್ಯಪಾನ ಬಿಡಲು ಆಗದೆ ಮಾನಸಿಕವಾಗಿ ನೊಂದು 29/1/2025 ರಂದು ರಾತ್ರಿ 8-30 ಕ್ಕೆ ವಾಸದ ಮನೆ ಹಿಂಬದಿಯಲ್ಲಿರುವ ಮರಕ್ಕೆ ಡ್ರಿಪ್ ವೈಯರ್ ಬಳ್ಳಿ ವೈಯರ್ ಕಿತ್ತುಕೊಂಡು ಉರುಳಾಗಿಸಿಕೊಂಡು ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 


ತಕ್ಷಣವೇ ಅವರನ್ನ ಚಿತ್ರದುರ್ಗದ ರಾಮಗಿರಿ ಆಸ್ಪತ್ರೆಯಿಂದ ತೋರಿಸಿ ಮರುದಿನ ಜ.30 ರಂದು ಮದ್ಯಾಹ್ನ 3 ಕ್ಕೆ ಶಿವಮೊಗ್ಗದ ಮೆಗ್ಗಾನ್ ಗೆ ಕರೆತಲಾಗಿತ್ತು. ಚಿಕಿತ್ಸೆ ನೀಡಲಾದರೂ ಸಹ ಚಿಕಿತ್ಸೆ ಫಲಕಾರಿಯಾಗಿದೆ ಹನುಮಂತಪ್ಪ ಇಂದು ಬೆಳಿಗ್ಗೆ 7-15 ಕ್ಕೆ ಮೃತಪಟ್ಟಿದ್ದಾರೆ. 


ಕಾಲುಜಾರಿ ಬಿದ್ದು ವೃದ್ಧೆ ಸಾವು


ಅದರಂತೆ ಶಿಕಾರಿಪುರ ಪಟ್ಟಣದ ಮಂಡಿಪೇಟೆಯ ನಿವಾಸಿ ಲೀಲಾವತಿ(72) ಎಂಬುವರು ಸ್ನಾನಕ್ಕೆಂದು ಬಚ್ಚಲು ಮನೆಗೆ ಹೋದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಅವರ ಮೃತ ದೇಹವನ್ನ ಸಿಮ್ಸ್ ಗೆ ನೀಡಲು ಬಯಸಿದ್ದು ಬಿದ್ದು ಗಾಯವಾದ ಕಾರಣ ಸಿಮ್ಸ್ ಈ ಮೃತ ದೇಹವನ್ನ ತಿರಸ್ಕರಿಸಿರುವುದಾಗಿ ತಿಳಿದು ಬಂದಿದೆ. ಮೃತ ದೇಹದ ಮೇಲೆ ಯಾವುದೇ ಗಾಯ ಇಲ್ಲವಾಗಿದ್ದರೆ ಮೃತದೇಹವನ್ನ ವೈದ್ಯಕೀಯ ಶಿಕ್ಷಣ ಸ್ವೀಕರಿಸಲಿದೆ. 


ಅನರೋಗ್ಯ ಮಹಿಳೆ ಸಾವು


ಅದರಂತೆ ಭದ್ರಾವತಿಯ ದೇವಿಕಾ ಎಂಬುವರು ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹಿಳ ಆಯೋಗದ ನಿರ್ವಹಣೆಯಲ್ಲಿದ್ದ ಮನೆಯಲ್ಲಿ ಅನಾರೋಗ್ಯದ ಹಿನ್ನಲೆಯಲ್ಲಿ ಸಾವನ್ನಪ್ಪಿದ್ದಾರೆ. 


ಅಧಿಕ ಮದ್ಯ ಸೇವನೆ ಸಾವು


ಅದರಂತೆ ಅಧಿಕ‌ ಮದ್ಯ ವ್ಯಸನದಿಂದ ನಿನ್ನೆ ನಗರದ ಪ್ರತಿಷ್ಠಿತ ಮೆಡಿಕಲ್ ಶಾಪ್ ಮುಂದೆ ಮಲಗಿದ್ದ 38 ವರ್ಷದ ಧನಂಜಯ ಸಾವನ್ನಪ್ಪಿದ್ದಾರೆ. ಈತ ಮೇಲಿನ ತುಂಗ ನಗರದಲ್ಲಿ ಮನೆಯಿದ್ದು ಈತ ಮನೆಯನ್ನ ಬಿಟ್ಟು 12 ವರ್ಷ ಕಳೆದಿತ್ತು. 

Post a Comment

أحدث أقدم