ಏರ್ ಪೂರ್ಟ್ ಎದುರಿನ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಯುವಕ ಸಾವು

 

ಶಿವಮೊಗ್ಗದ ಏರ್ ಪೋರ್ಟ್ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು ಕಂಡಿದ್ದಾನೆ. ಹೆಲ್ಮೆಟ್ ಧರಿಸದ ಕಾರಣ ಯುವಕನ ಪ್ರಾಣ ಪಕ್ಷಿ ಹಾರಿಹೋಗಿದೆ. 


ನಗರದ ಪುಟ್ಟಪ್ಪನ ಕ್ಯಾಂಪ್ ನಲ್ಲಿರುವ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಡು ವಾಪಾಸ್ ಭದ್ರಾವತಿಯ ಹುಣ್ಸೆಕಟ್ಟೆ ಜಂಕ್ಷನ್ ನಲ್ಲಿರುವ ಮನೆಗೆ ಬೈಕ್ ನಲ್ಲಿ ಹೋಗುವಾಗ ಶಿವಮೊಗ್ಗ ಏರ್‌ಪೋರ್ಟ್ ಗೇಟ್ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದು ಯುವಕ ಸಾವನ್ನಪ್ಪಿದ್ದಾನೆ. 


ಮೃತನನ್ನ‌ ನಿಶ್ಚತ್ (20) ಎಂದು ಗುರುತಿಸಲಾಗಿದೆ. ಪೈಂಟ್ ಕೆಲಸ ಮಾಡಿಕೊಂಡಿದ್ದ‌ ನಿಶ್ಚಿತ್ ನಿನ್ನೆ ರಾತ್ರಿ ಪುಟ್ಟಪ್ಪನ ಕ್ಯಾಂಪ್ ನಲ್ಲಿರುವ ರೆಸಾರ್ಟ್ ನಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಬಂದು ಊಟ ಮುಗಿಸಿಕೊಂಡು ವಾಪಾಸ್ ಜಂಕ್ಷನ್ ಗೆ ಬೈಕ್ ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. 


ಮುಖ್ಯವಾಗಿ ಬೈಕ್ ನಲ್ಲಿ ಹೋಗುವಾಗ ನಿಶ್ಚಿತ್ ಹೆಲ್ಮೆಟ್ ಧರಿಸದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Post a Comment

أحدث أقدم