ಅತಿಥಿ ಶಿಕ್ಷಕರ ಮತ್ತು ಗುತ್ತಿಗೆದಾರರ ಆತ್ಮಹತ್ಯೆ ಬಯಸುತ್ತಿದೆಯೇ-ಈಶ್ವರಪ್ಪ

 


ಬಾಗಕೋಟೆ, ಹಾವೇರಿ ಗದಗ ಶಿವಮೊಗ್ಗದ ಕೆಲ ಅತಿಥಿ(guest) ಶಿಕ್ಷಕರ(teacher) ಸಮಸ್ಯೆ ಬಗ್ಗೆ ಮುಖ್ಯಮತ್ರಿಗಳಿಗೆ ಪತ್ರ(letter) ಬರೆಯುತ್ತಿದ್ದೇನೆ, ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರ ಜೀವ ಉಳಿಸಲು ಮಾಜಿ ಡಿಸಿಎಂ ಈಶ್ವರಪ್ಪ ಪತ್ರ ಬರೆಯುತ್ತಿರುವುದಾಗಿ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅತಿಥಿ ಉಪನ್ಯಾಸಕರಿಗೆ ಆಗಸ್ಟ್ ನಿಂದ ಗೌರವ ಧನ ಬಂದಿಲ್ಲ. ಅವರ ಜೀವನ ಹೇಗೆ ನಡೆಸಬೇಕು. ಶಿಕ್ಷಕರನ್ನ ಗುರುಗಳಾಗಿ ನೋಡುತ್ತೇವೆ. ಗುರುಗಳು ಸಮಸ್ಯೆಯಲ್ಲಿದ್ದಾರೆ. ಖಜಾನೆ ವರೆಗೆ ಗೌರವಧನದ ಬಿಲ್ ಬರುತ್ತೆ ನಂತರ ತಡೆ ಹಿಡಿಯಲಾಗುತ್ತಿದೆ. ಇದು ವಿಚಿತ್ರ ಬೆಳವಣಿಗೆಯಾಗಿದೆ ಎಂದು ದೂರಿದರು. 


ಇವರು ಗ್ಯಾರೆಂಟಿ ಹಣ ಕೇಳ್ತಾ ಇಲ್ಲ. ಸೇವೆ ಮಾಡಿರುವುದಕ್ಕೆ ಗೌರವಧನ ಕೇಳ್ತಾಯಿದ್ದಾರೆ. ರಾಜ್ಯ ಸರ್ಕಾರಕ್ಕೆ ಸಾಧ್ಯವಾಗ್ತಾಯಿಲ್ಲ ಎಂದರೆ ಈ ರಾಜ್ಯ ಸರ್ಕಾರ ಇದ್ದರೆಷ್ಟು ಹೋದರೆಷ್ಟು, ಇವರು ಆತ್ಮಹತ್ಯ ಮಾಡ್ಕೋಬೇಕಾ ಎಂದು ಪ್ರಶ್ನಿಸಿದರು.


ಆತ್ಮಹತ್ಯೆ ಮಾಡಿಕೊಂಡ ನಂತರ ಮನೆಗೆ ಹೋಗಿ ಸಾಂತ್ವಾನ ಹೇಳಲು ಹೋಗ್ತಾಯಿದ್ದೀರಾ? ಹಾಗಾದರೆ ಆತ್ಮಹತ್ಯೆಗೆ ರಾಜ್ಯ ಸರ್ಕಾರ ಉತ್ತೇಜನ ನೀಡ್ತಾ ಇದ್ದೀರಾ? ಎಂದು ಪ್ರಶ್ನಿಸಿದರು. ಡಿಸೆಂಬರ್ ವರೆಗೆ ಸ್ವೀಕರಿಸದೆ ಇರುವಂತೆ ಸರ್ಕಾರ ಪತ್ರ ಬರೆದಿದೆ. ಹಾಗಾದರೆ ಒಂದು ತಿಂಗಳ ರಾಜ್ಯ ಸರ್ಕಾರದ ಸಚಿವರ ಪೇಮೆಂಟ್ ಪಡೆಯಬೇಡಿ ಏನಾಗುತ್ತೆ ನೋಡೋಣ? ಎಂದು ಸವಾಲು ಹಾಕಿದರು.


ಸಚಿವ ಮಧು ಬಂಗಾರಪ್ಪನವರಿಗೆ ಪತ್ರ ಬರೆಯುತ್ತಿದ್ದೇನೆ. ಕ್ರಾಂತಿ ವೀರ ಬ್ರಿಗೇಡ್ ನ ವತಿಯಿಂದ ಮೊದಲ ಹೋರಾಟ ಕೈಗೆತ್ತಿಕೊಳ್ಳುತ್ತಿದ್ದೇನೆ. 


ಗುತ್ತಿಗೆದಾರರ 64 ಸಾವಿರ ಕೋಟಿ ಹಣ ತಡೆ ಹಿಡಿಯಲಾಗಿದೆ. ನಮ್ಮ ಸರ್ಕಾರಕ್ಕೆ ಟೀಕಿಸುತಿದ್ದ ಆಗಿನ ವಿಪಕ್ಷದಲ್ಲಿದ್ದ ಕಾಂಗ್ರೆಸ್ ಈಗ ಅಧಿಕಾರದಲ್ಲಿದೆ. ಹಾಗಾಗದರೆ ಗುತ್ತಿಗೆದಾರರ ಆತ್ಮಹತ್ಯೆಯನ್ನ ಕಾಯ್ತಿದ್ದೀರ ಎಂದು ಪ್ರಶ್ನಿಸಿದರು. 


ಕಾನೂನು ಸುವ್ಯವಸ್ಥೆ ಕುಸಿತ


ಮೈಸೂರಿನ ಉದಯಗಿರಿ ಪ್ರಕರಣವನ್ನ‌ ನಾಗರೀಕ ಸಮಾಜ ಒಪ್ಪಲ್ಲ. ಡಿವೈಎಸ್ಪಿ ಮೇಲೆ ಸಾವಿರಾರು ಜನ ಕಲ್ಲು ತೆಗೆದುಕೊಂಡು ಹೊಡೆಯುತ್ತಾರೆ ಎಂದರೆ ಕಾನೂನು ಸುವ್ಯವಸ್ಥೆ ಹೇಗಾಗಿದೆ. ಸಾವಿರಾರು ಜನ ಏಕಾ ಏಕಿ ಹೇಗೆ ಬಂದರು. ಲೋಡ್ ಗಟ್ಟಲೆ ಕಲ್ಲು ಹೇಗೆ ಬಂತು. 


ಕಾಂಗ್ರೆಸ್ ನ ಹರಿಪ್ರಸಾದ್, ಲಕ್ಷ್ಮಣ್ ಗಲಭೆಗೆ ಬಂದವರು ಆರ್ ಎಸ್ ಎಸ್ ನವರು ಎಂದಿದ್ದಾರೆ. ಆರ್ ಎಸ್ ಎಸ್ ಹೇಡಿಗಳಲ್ಲ. ಹರಿಪ್ರಸಾದ್ ಅವರಿಗೆ ಕಿವಿ ಮಾತನಾಡುವೆ. ಬಂಧಿಸಿದವರೆಲ್ಲಾ ಮುಸ್ಲೀಂರು ಆರ್ ಎಸ್ ಎಸ್ ನವರಲ್ಲ ಎಂದ ಈಶ್ವರಪ್ಪ ಭದ್ರಾವತಿ ಶಾಸಕರ ಪುತ್ರ ಮಹಿಳಾ ಅಧಿಕಾರಿಯೊಬ್ವರಿಗೆ ಯಾವ ಕುಡುಕನು ಆ ಪದ ಬಳಸೊಲ್ಲ. ಆದರೆ ಪ್ರಕರಣದಲ್ಲಿ ಶಾಸಕ ಮಗನ ಹೆಸರು ಸೇರಿಸದೆ ಇರುವಂತೆ ನೋಡಿಕೊಳ್ಳಲಾಗಿದೆ. ಅಂತಹವರಿಗೆ ಕ್ಷೀರಾಭಿಷೇಕ ನಡೆಸುತ್ತಾರೆ. ಆದರೆ ಹರಿಪ್ರಸಾದ್ ಮತ್ತು ಲಕ್ಷ್ಮಣ್ ಆರ್ ಎಸ್ ಎಸ್ ಕೈವಾಡ ಎನ್ನುತ್ತಾರೆ. ಅಂತಹವರಿಗೆ ಕ್ಷೀರಾಭಿಷೇಕ ಮಾಡಿದರೂ ಅಚ್ಚರಿಯಲ್ಲ ಎಂದರು. 


ಕಠಿಣ ಕ್ರಮ ಎಲ್ಲಿ?


ಹೀಗಾದರೆ ಪೊಲೀಸರು ತಮ್ಮ ಜೀವ ಒತ್ತೆಯಿಟ್ಟು ಹೇಗೆ ಕೆಲಸ ಮಾಡ್ತಾರೆ ಎಂದು ಪ್ರಶ್ನಿಸಿದರು. ಘಟನೆ ನಡೆದಾಗಲೆಲ್ಲ ಕಾಂಗ್ರೆಸ್ ಸಚಿವರು ಕಠಿಣ ಕ್ರಮ ಎನ್ನುರತ್ತಾರೆ. ಯಾವ ಕಠಿಣ ಕ್ರಮ ಜರುಗಿದೆ. ಚೆನ್ನಗಿರಿ ಆಯಿತು. ಶಿವಮೊಗ್ಗ ಆಯಿತು ಈಗ ಮೈಸೂರಿನಲ್ಲಿ ಪ್ರಕರಣ ರಿಪೀಟ್ ಆಗ್ತಾಯಿದೆ‌. ಪ್ರಕರಣದಲ್ಲಿ ನೈಜ ಆರೋಪಿಗಳನ್ನ‌ಕೈಬಿಟ್ಟು ಬೇರೆಯವರನ್ನ‌ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದರು. 


ಡಿಕೆಶಿ ಅಪ್ರಾಪ್ತರು ಎನ್ನುತ್ತಾರೆ. ಒಬ್ಬಬ್ವರು ಹೀಗೆ ಹೇಳಿಕೆ ಕೊಟ್ರೆ ನಾಳೆ ನಮ್ಮನ್ನ ರಕ್ಷಣೆ ಮಾಡಲು ಪೊಲೀಸರೆ ಮುಂದು ಬರೊಲ್ಲ. ಘಟನೆ ನಡೆದಾಗಲೆಲ್ಲ ಆರ್ ಎಸ್ ಎಸ್ ಎಂದು ಹಿಟ್ ಅಂಡ್ವರನ್ ಮಾಡೋದು. ಗೂಂಡಾಗಳ ರಕ್ಷಣೆಗೆ ಸರ್ಕಾರ ಇರೋದಾ ಎಂದು ಆಕ್ಷೇಪಿಸಿದರು. 


ಖರ್ಗೆ ಕ್ಷಮೆ ಕೇಳಲಿ


ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭ ಮೇಳದಲ್ಲಿ 57 ಕೋಟಿ ಜನ ಸ್ನಾನ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಗೆ ಸ್ನಾನ ಮಾಡಿದರೆ ಬಡತನ ನಿರ್ಮೂಲನ ಆಗುತ್ತಾ ಎಂದು ಗಾಂಧೀಜಿಯವರ ಕನಸನ್ನ ನುಚ್ಚು ನೂರು ಮಾಡಿದ್ದಾರೆ. ಸಿಂಗ್ವಿ, ಡಿಕೆಶಿ ಹೋಗಿ ಸ್ನಾನ‌ಮಾಡಿದ್ದಾರೆ. ಅವರೆಲ್ಲ ಪಾಪಿಷ್ಟರಾ? ಖರ್ಗೆ ತಮ್ಮ ಹೇಳಿಕೆಯ ಬಗ್ಗೆ ಕ್ಷಮೆ ಕೇಳಲಿ ಎಂದರು.


ಬಜೆಟ್ ಮಂಡಿಸುವ ಸಿದ್ದರಾಮಯ್ಯ ಅನುಷ್ಠಾನಗೊಳಿಸಲಿ!


ಸಿದ್ದರಾಮಯ್ಯ ನವರು ಎಷ್ಟೇ ಬಜೆಟ್ ಮಂಡಿಸಿದರು. ಅದನ್ನ ಅನುಷ್ಠಾನ ಮಾಡಲು ಸಾಧ್ಯವಾಗುತ್ತಾ? ಅಲ್ಪಸಂಖ್ಯಾತರನ್ನ ಹಿಂದುಳಿದವರನ್ನ ಉದ್ದಾರ ಮಾಡುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ಸಲಹೆ ನೀಡುದ ಈಶ್ವರಪ್ಪ ಗ್ಯಾರೆಂಟಿಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಹೇಳುವ ಸಿಎಂ ಫೈನಾನ್ಸ್ ಮಿನಿಸ್ಟರ್ ಆಗಲು ಯೋಗ್ಯರಲ್ಲ ಎಂದರು. 


ವಕ್ಫ್ ತಿದ್ದುಪಡಿ ಮಾಡಿ ಹೊಸ ಕಾನೂನು ಜಾರಿಗೆ ತರುತ್ತಿರುವ ಪ್ರಧಾನಿ ಮೋದಿಗೆ ಅಭಿನಂದಿಸುವೆ ಎಂದರು.

Post a Comment

أحدث أقدم