ವಿರೋಧ ಪಕ್ಷದಲ್ಲಿ ಭವಿಷ್ಯ ಹೇಳುವರು ಒಬ್ಬರಲ್ಲ ಬೇಕಾದಷ್ಟು ಜನರಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ಅವರ 2028ಕ್ಕೆ ಕಾಂಗ್ರೆಸ್ ಸರ್ಕಾರ ಉರುಳುತ್ತೆ ಎಂಬ ಹೇಳಿಕೆಗೆ ತಿರುಗೇಟು ನೀಡಿ ಬೇರೆ ಬೇರೆ ಕಡೆ ಕುಳಿತುಕೊಂಡು ವಿಪಕ್ಷದವರು ಒಬ್ಬೊಬ್ಬರು ಕಾಂಗ್ರೆಸ್ ಸರ್ಕಾರದ ಭವಿಷ್ಯವನ್ನು ಹೇಳುತ್ತಿದ್ದಾರೆ. ನಮ್ಮ ಭವಿಷ್ಯ ರಾಜ್ಯದ ಜನರ ಕೈಯಲ್ಲಿದೆ ಬೇರೆಯವರ ಕೈಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿಐಎಸ್ಎಲ್ ವಿಚಾರದ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರ್ ಮಾತಿಗೆ ಉತ್ತರಿಸಿದ ಸಚಿವರು, ಕುಮಾರಸ್ವಾಮಿ ರವರು ರಾಜ್ಯವನ್ನು ಆಳಿದ್ದಾರೆ. ಅವರಿಗೆ ಎಲ್ಲಾವು ಗೂತ್ತಿದೆ ಅಲ್ವಾ, ಮಾತು ಕೊಟ್ಟಂತೆ ಮಾರ್ಯಾದೆಯಿಂದ ನಡೆದುಕೊಳ್ಳಬೇಕೆಂದರು.
ಗಣಿಭೂಮಿಯನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ ಅದನ್ನು ಪಡೆಯಲು ಆಗುತ್ತಿಲ್ಲ. ಕುಮಾರ ಸ್ವಾಮಿ ರವರು ನನ್ನ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಹೇಳಿದ್ರು. ಈಗ ಅವರು ಅದೇ ರೀತಿ ನಡೆದುಕೊಳ್ಳಬೇಕು. ಎರಡು ಬಾರಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ ಹಾಗೆ ಈಗ ಕೈಗಾರಿಕಾ ಸಚಿವರು ಕೂಡ ಆಗಿದ್ದಾರೆ. ಒಂದು ವೇಳೆ ಮಾತು ತಪ್ಪಿದರೆ ರಾಜ್ಯಕ್ಕೆ ಮೋಸ ಮಾಡಿದ ಹಾಗೆ ಎಂದರು.
ಕುಮಾರಸ್ವಾಮಿ ರವರು ವಿರೋಧ ಪಕ್ಷದಲ್ಲಿಧದುಕೊಂಡು ಇಂತಹ ಹೇಳಿಕೆ ನೀಡುತ್ತಾರೆ. ಆದರೆ ಅವರು ಅವರ ಜೆಡಿಎಸ್ ಪಕ್ಷದ ಕುರಿತು ತಿಳಿದುಕೊಂಡರೆ ಸಾಕು ಎಂದು ಕಿವಿಮಾತು ಹೇಳಿದರು. ಬಜೆಟ್ ರಿವ್ಯೂ ಮೀಟಿಂಗ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಸಿಎಂಗೆ ಕಾಲು ನೋವು ಇದ್ದ ಕಾರಣ ಸಭೆಯನ್ನು ಇಂದು ನಡೆಸುತ್ತಿದ್ದಾರೆ.
ಇಂದು ಎಲ್ಲಾ ಇಲಾಖೆಯ ಸಭೆಯನ್ನು ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹಲವು ಬದಲಾವಣೆಯನ್ನು ತರಲಾಗುತ್ತಿದೆ. ಹಲವು ಕಲಿಕ ಯೋಜನೆಯನ್ನು ತರಲಾಗುತ್ತಿದೆ. ಜಿಲ್ಲೆಯಿಂದ ಅನೇಕ ವಿಷಯಗಳನ್ನು ಸಿಎಂ ಗಮನಕ್ಕೆ ತರಲಾಗಿದೆ. ನೀರಾವರಿ, ಆಡಳಿತ್ಮಾಕ ಯೋಜನೆಗಳ ಬಗ್ಗೆ ಗಮನಕ್ಕೆ ತರಲಾಗಿದೆ ಎಂದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಹೊಸ ಜಿಲ್ಲಾಸ್ಪತ್ರೆಗೆ ನಾನು ದಿನೇಶ್ ಗುಂಡೂರಾವ್ ರವರ ಜೊತೆ ಮಾತನಾಡಿದ್ದೆನೆ. ಅವರು ಆಸ್ಪತ್ರೆಗೆ ಜಾಗ ಬೇಕೆಂದು ಕೇಳಿದ್ದಾರೆ. ಇದರ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.
ಬಿಜೆಪಿಯ ಆಂತರಿಕ ಜಗಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ತಿರಸ್ಕರಿಸಿದ ಸಚಿವರು, ಆ ವಿಚಾರ ಮಾತನಾಡಿ ನನ್ನ ಮೈ ಮೇಲೆ ಯಾಕೆ ರಾಡಿಯನ್ನು ಹಾಕಿಕೊಳ್ಳಬೇಕು. ಅವರ ರಾಡಿಯನ್ನ ಅವರೇ ಹಾಕಿಕೊಳ್ಳಲಿ ಎಂದು ಸಲಹೆ ನೀಡಿದರು
إرسال تعليق