ಶಿವಮೊಗ್ಗದಲ್ಲಿ ಅಪಘಾತ ಸಂಭವಿಸದಂತೆ ಪೊಲೀಸ್ ಇಲಾಖೆ ಹೆಲ್ಮೆಟ್ ಜಾಗೃತಿ ನಡೆಸಿದೆ. ಈ ಬಾರಿಮಕ್ಕಳೂ ಸಹ ಸುರಕ್ಷಿತವಾಗಿ ಚಲಿಸಲು ಅವರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಸಂಚಾರಿ ಪೊಲೀಸ್ ರಿಂದ ನಡೆದಿದೆ.
ಇಂದು ಸಿಪಿಐ ಸಂತೋಷ ಕುಮಾರ್ ಡಿ.ಕೆ. ಪಿಎಸ್ಐ ಭಾರತಿ ಮೇಡಂ ಮತ್ತು ಸಿಬ್ಬಂದಿಗಳು ವಿನೋಬ ನಗರದ ಕ್ರೀಯೇಟಿವ್ ಕಿಡ್ಡೋಸ್ ಶಾಲೆಯ ಹತ್ತಿರ ಪೋಷಕರಿಗೆ ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ತಮ್ಮ ಜೊತೆಯಲ್ಲಿರುವ ಮಕ್ಕಳಿಗೂ ಹೆಲ್ಮಟ್ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
09 ತಿಂಗಳಿನಿಂದ ಹಿಡಿದು 4 ವರ್ಷದೊಳಗಿನ ಮಕ್ಕಳನ್ನು ಕರೆದೊಯ್ಯುವ ಸಂದರ್ಭದಲ್ಲಿ ಮಕ್ಕಳಿಗೆ HELMET ಮತ್ತು SAFETY HARNESS ಅನ್ನು ಕಡ್ಡಾಯವಾಗಿ ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
إرسال تعليق