ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿರುವ ಮಾಮ್ ಕೋಸ್ ಚುನಾವಣೆ

 

ಪ್ರತಿಷ್ಠಿತ ಮಾಮ್ ಕೋಸ್ ಚುನಾವಣೆಗೆ ಮತದಾನ ಆರಂಭವಾಗಿದ್ದು 17 ವಿಧಾನಸಭಾ ಕ್ಷೇತ್ರದಲ್ಲಿ 9 ಮತಕೇಂದ್ರಗಳು 93 ಬೂತ್ ಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. 


ಬೆಳಿಗ್ಗೆ 9 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದೆ. ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ನ್ಯಾಮತಿ, ಚನ್ನಗಿರಿ, ಹೊನ್ನಾಳಿ ಮತ್ತು ಶಿವಮೊಗ್ಗ ಜಿಲ್ಲೆಯ 93 ಬೂತ್ ಗಳ ಮತಪೆಟ್ಟಿಗೆಗಳು ಶಿವಮೊಗ್ಗಕ್ಕೆ ಬಂದ ನಂತರ ಮತ ಎಣಿಕೆ ಆರಂಭವಾಗಲಿದೆ. ರಾತ್ರಿ 10 ರಿಂದ ಮತ ಎಣಿಕೆ ನಡೆಯು ಸಾಧ್ಯತೆಯಿದ್ದು ನಾಳೆ ಬೆಳಿಗ್ಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಗಳಿವೆ.


19 ನಿರ್ದೇಶಕನ್ನ ಆಯ್ಕೆ ಮಾಡಬೇಕಿದ್ದು 39 ಜನರು ಅಖಾಡದಲ್ಲಿದ್ದಾರೆ. 11,511 ಅರ್ಹ ಮತದಾರರು ಮತಚಲಾಯಿಸಬೇಕಿದ್ದು ಎಷ್ಟು ಜನ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಕಾದು ನೋಡಬೇಕಿದೆ. 

Post a Comment

أحدث أقدم