ಅನಧಿಕೃತ ಎಣ್ಣೆಗೆ ಬ್ರೇಕ್ ಹಾಕಿ ಮಹಿಳೆಯರ ಆಗ್ರಹ

 

ಶಿವಮೊಗ್ಗದಲ್ಲಿ ಗುಳಿಗುಳಿ ಶಂಕರದ ಅಡ್ಡೇರಿ, ಹಾರೋಹಿತ್ಲು, ಕಲ್ಲುಹಳ್ಳ ಗುಬ್ಬಿಗಾ ಮೊದಲಾದ ಗ್ರಾಮಸ್ಥರ ಮಹಿಳೆಯರು ಇಂದು ಡಿಸಿ ಕಚೇರಿಗೆ ಬಂದು ದೂರು ನೀಡಿದ್ದಾರೆ. ಗ್ರಾಮದಲ್ಲಿ ಅತಿರಿಕ್ತವಾಗಿ ಮದ್ಯ ಮಾರಾಟ ಮಾಡುತ್ತಿರುವುದರ ವಿರುದ್ಧ ಮಹಿಳೆಯರು ಡಿಸಿಗೆ ಮನವಿ ನೀಡಿದ್ದಾರೆ.


ಕಿರಾಣಿ ಅಂಗಡಿ ಮತ್ತು ಇತರೆಡೆ ಮದ್ಯ ಮಾರಾಟವನ್ನ ಅಧಿಕ ಹಣಕ್ಕೆ ಮಾರಾಟ ಮಾಡುತ್ತಿದ್ದು, ದೂರು ನೀಡಿದಾಗ ಮಾತ್ರ ಅಧಿಕಾರಿಗಳು ಬಂದು ಬಂದ್ ಮಾಡುತ್ತಾರೆ. ನಂತರ ಮತ್ತೆ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. 


ನಸ್ರೀನ್ ಬಾನು ಮಾತನಾಡಿ, ಅಧಿಕಾರಿಗಳು ನಮ್ಮ ಕಷ್ಟ ಕೇಳುತ್ತಿಲ್ಲ. ಪ್ರತಿಭಟನೆ ನಡೆಸಿದರೆ ನಾಲ್ಕು ಮದ್ಯ ಮಾರಾಟ ಬಂದ್ ಆಗಲಿದ್ದು ಮತ್ತೆ ನಾಲ್ಕು ದಿನಗಳ ನಂತರ ಮತ್ತೆ ಮಾರಾಟ ಮಾಡುತ್ತಾರೆ. ಕಠಿಣ ಕ್ರಮ ಜರುಗಿಸೊಲ್ಲ. ಮದ್ಯ ಮಾರಾಟದಾರರೊಂದಿಗೆ


ಅಡ್ಡೇರಿಗ್ರಾಮದ ದ್ರಾಕ್ಷಾಯಿಣಿ ಮಾತನಾಡಿ ಬೆಳ್ಳೂರಿನಲ್ಲಿ ಒಂದಿಷ್ಟು ಗುಂಪು ಹೆಣ್ಣುಮಕ್ಕಳನ್ನ ಅದುಮಿ‌ ಗಂಡಸ್ಸಿನ ದರ್ಪ ಮುಂದುವರೆದಿದೆ. ಇದಕ್ಕೆ ಬ್ರೇಕ್ ಹಾಕಬೇಕಿದೆ ಎಂದರು. ಮತ್ತೋರ್ವ ಮಹಿಳೆ ಸಂಘಕ್ಕೆ ಕಟ್ಟುವ ಹಣವನ್ನ ಗಂಡ ಕದ್ದು ಎಣ್ಣೆ ಹೊಡೆದುಕೊಂಡು ಬರುತ್ತಾನೆ. ಮಗ 9 ನೇ ತರಗತಿ ಓದುತ್ತಿದ್ದಾನೆ. ಆತನ ಬ್ಯಾಗ್ ಗಳಲ್ಲಿ ಬೀಡಿ ಸಿಗರೇಟ್ ಗಳು ಬೆಂಕಿ ಪೊಟ್ಟಣದಲ್ಲಿ ಪತ್ತೆಯಾಗುತ್ತೆ ಎಂದರೆ ದುಶ್ಚಟಕ್ಕೆ ಹಳ್ಳಿ ಜನರು ಮಾರು ಹೋಗುತ್ತಿದ್ದಾರೆ ಎಂದು ದೂರಿದರು.


ಗ್ರಾಮದಲ್ಲಿ ಅನಧಿಕೃತವಾಗಿ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳು ಈ ಅನಧಿಕೃತ ಎಣ್ಣೆ ಮಾರಾಟಗಾರರೊಂದಿಗೆ ಮಿಂಗಲ್ ಆಗಿರುವ ಅನುಮಾನವಿದೆ. ಎಷ್ಟು ಬಾರಿ ರೈಡ್ ಮಾಡಿದರೂ ದಂಡ ಕಟ್ಟಿ ಮತ್ತೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಹಾರೋಹಿತ್ಲು ಗ್ರಾಮದ ಶ್ರೀ ಕ್ಷೇತ್ರ ಗುಳಿ ಗುಳಿ ಶಂಕರೇಶ್ವರ ಸೇವಾ ಸಮಿತಿಯ ವತಿಯಿಂದ ಡಿಸಿಗೆ ಮನವಿ ನೀಡಲಾಗಿದೆ.

Post a Comment

أحدث أقدم