ತಾವರೆಕೊಪ್ಪದ ಲಯನ್ ಸಫಾರಿಗೆ ಅತಿಥಿಯೊಂದನ್ನ ತರಲಾಗಿದೆ. ತಾಯಿಯಿಂದ ಬೇರ್ಪಟ್ಟ ಮರಿ ಹೆಣ್ಣು ಕರಿಚಿರತೆಯನ್ನ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಅತಿಥಿಯನ್ನ ನಿನ್ನೆ ರಾತ್ರಿ ಕರೆತರಲಾಗಿದೆ.
ಎರಡು ವರ್ಷದ ಕರಿಚಿರತೆಯನ್ನ ಹೊನ್ನಾವರ ತಾಲೂಕಿನ ಕತಗಾಲ ವಲಯದಲ್ಲಿ ಚಟುವಟಿಕೆಯಿಲ್ಲದೆ ತಾಯಿಯಿಂದ ಬೇರ್ಪಟ್ಟು ಮಲಗಿತ್ತು. ಹೊನ್ನಾವರ ಕುಮಟ ಊರುಗಳ ನಡುವಿನ ರಸ್ತೆಯ ಸೇತುವೆಯೊಂದರಲ್ಲಿ ಚಲನವಲನ ಕಳೆದುಕೊಂಡಿತ್ತು.
ಸಾರ್ವಜನಿಕರು ಕರಿಚಿರತೆಯನ್ನ ಓಡಿಸಲು ಯತ್ನಿಸಿದ್ದಾರೆ. ಚಿರತೆ ಓಡಾಡಲು ಸಾಧ್ಯವಾಗದಿದ್ದಾಗ ಅಲ್ಲಿನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ್ದ ಅಲ್ಲಿನ ಅರಣ್ಯ ಇಲಾಖೆಯ ಸಿಬ್ಬಂದಿಗಳು ತಾವರೆಕೊಪ್ಪದ ಲಯನ್ ಸಫಾರಿಗೆ ಮಾಹಿತಿ ನೀಡಿದ್ದಾರೆ.
ಲಯನ್ ಸಫಾರಿಯ ಡಿಸಿಎಫ್ ಯೋಗೀಶ್ ಮತ್ತು ತಂಡದವರು. ಸ್ಥಳಕ್ಕೆ ಧಾವಿಸಿ ನಿನ್ನೆ ಕರಿಚಿರತೆಯನ್ನ ಕರೆತಂದಿದ್ದಾರೆ. ಚಿರತೆ ಇನ್ನೂ ಬಾಲ್ಯಾವಸ್ಥೆ ಯಲ್ಲಿರುವುದಾಗಿ ತಿಳಿದುಬಂದಿದೆ. ಹೆಣ್ಣು ಕರಿಚಿರತೆ ಸಫಾರಿಗೆ ಬಂದಿದೆ. ಚಿರತೆಯನ್ನ ಚಿಕಿತ್ಸೆಯಲ್ಲಿರಿಸಲಾಗಿದೆ. ಒಂದು ವೇಳೆ ಜೀವಂತವಾಗಿ ಬದುಕಿದರೆ ಸಫಾರಿಯಲ್ಲಿ ಇದು ಎರಡನೇ ಕರಿಚಿರತೆಯಾಗಲಿದೆ.
ಮಿಂಚು ಎಂಬ ಹೆಣ್ಣು ಕರಿಚಿರತೆ ಈಗಾಗಲೇ ಸಫಾರಿಯಲ್ಲಿದೆ. ಒಂದು ವೇಳೆ ಚಿಕಿತ್ಸೆ ಫಲಕಾರಿಯಾದರೆ ಇದು ಎರಡನೇ ಕರಿಚಿರತೆಯಾಗಲಿದೆ.
إرسال تعليق