ವಸತಿ ಸಚಿವ ಜಮೀರ್ ಅಹ್ಮದ್ ಫೆ.25 ರಂದು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು ಆಶ್ರಯ ಮನೆಗಳನ್ನ ಲಾಟರಿ ಮೂಲಕ ಆರಿಸಲಿದ್ದಾರೆ ಎಂದು ಎಂ ಎಲ್ ಸಿ ಬಲ್ಕಿಸ್ ಭಾನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2013 ರಲ್ಲಿ ಆರಂಭವಾದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ 3000 ಆಶ್ರಯ ಮನೆಗಳನ್ನ ಹಂಚಲು ಯೋಜಿಸಲಾಗಿತ್ತು. ಈಗಾಗಲೇ 624 ಮನೆಗಳನ್ನ ಮೊದಲನೆ ಹಂತದ ಮನೆ ಹಂಚಲಾಗಿದೆ.
ಎರಡನೇ ಹಂತದಲ್ಲಿ 625 ಮನೆಗಳನ್ನ ನೀಡಲಾಗುವುದು. ಫಲಾನುಭವಿಗಳ ಒತ್ತಡದ ಮೇರೆಗೆ ಮನೆ ಹಂಚಲಾಗುತ್ತಿದೆ. ಸವಲತ್ತುಗಳನ್ನ ನೀಡಿ ಹಂಚಬೇಕಿತ್ತು. ಆದರೆ ಈಗ ತಾತ್ಕಾಲಿಕ ವ್ಯವಸ್ಥೆ ನೀಡಿ ಮನೆಗಳನ್ನ ನೀಡಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಮಾತನಾಡಿ ಗೋವಿಂದಾಪುರದಲ್ಲಿ ಬಸ್, ಆಸ್ಪತ್ರೆ, ಶಾಲೆಗಳನ್ನ ನೀಡಬೇಕಿದೆ. ನಮ್ಮ ಪಕ್ಷದ ಕಾರ್ಯಕ್ರಮವಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ನೀಡಬೇಕಿತ್ತು. 12 ವರ್ಷದ ನಂತರ ಮತ್ತೆ ನೀಡಲಾಗಿದೆ. ಮಧ್ಯದಲ್ಲಿ ಬಂದ ಸರ್ಕಾರಗಳು ನೀಡಲಿಲ್ಲ. ಉಸ್ತುವಾರಿ ಸಚಿವರ ಹೆಚ್ಚಿನ ಗಮನ ಹರಿಸಿ ಕಾರ್ಯಕ್ರಮವನ್ನ ವ್ಯವಸ್ಥಿತವಾಗಿ ಮಾಡಲಾಗಿದೆ ಎಂದರು.
ಗೋವಿಂದಾಪುರದಲ್ಲಿಯೇ ಲಾಟರಿ ಎತ್ತಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್ ಮಾತನಾಡಿ, ಆರ್ಡಿ ಪಿಆರ್ ಮೂಲಕ ನೀರು ಕೊಡಬೇಕಿತ್ತು. ಈಗ ಬೋರ್ ಗಳ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಮೂರು ಕಿಮಿ ದೂರದ ಪೈಪ್ ಲೈನ್ ಹಾಕಬೇಕಿದೆ. ರಸ್ತೆಗೆ ಟಾರ್ ಹಾಕಲಾಗಿದೆ. ನಮ್ಮ ಕ್ಲೀನಿಕ್, ಸರ್ಕಾರಿ ಶಾಲೆ, ಬಸ್ ನ ವ್ಯವಸ್ಥೆ ಮಾಡಲಾಗಿದೆ. ಎರಡು ಬಾರಿ ಮುಂದು ಹೋಗಿದೆ.ಈಗ ಮೂಹೂರ್ತ ಫಿಕ್ಸ್ ಆಗಿದೆ ಎಂದರು.
إرسال تعليق