ಶಿವಮೊಗ್ಗದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಯಲ್ಲಿ ನಿರ್ಮಿಸಿರುವ ಆಶ್ರಯ ಮನೆಗಳ (Ashraya House) ಹಂಚಿಕೆಗೆ ದಿನಾಂಕ ಫಿಕ್ಸ್ (date fix) ಆಗಿದೆ. ಮೆಸ್ಕಾಂಗೆ ಕಟ್ಟಬೇಕಿರುವ 13 ಕೋಟಿ ರೂ. ಕಟ್ಟಲು ವಸತಿ ಸಚಿವ ಜಮೀರ್ ಅಹಮದ್ ಸಮ್ಮತಿಸಿರುವುದರಿಂದ ಮನೆ ಹಂಚಿಕೆಗೆ ದಿನಾಂಕ ಫಿಕ್ಸ್ ಆಗಿದೆ.
ಗೋಪಿಶೆಟ್ಟಿ ಕೊಪ್ಪ ಮತ್ತು ಗೋವಿಂದಾಪುರದ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವಂತೆ ಶಾಸಕ ಚೆನ್ನಬಸಪ್ಪನವರ ನೇತೃತ್ವದಲ್ಲಿ ಆಶ್ರಯ ಸಮಿತಿಯ ಸಭೆ ಕರೆದು ನಿರ್ಣಯಿಸಲಾಗಿತ್ತು. ಇನ್ನೇನು ಸಭೆ ನಡೆಯಲಿದೆ ಎನ್ನುವಷ್ಟರಲ್ಲಿ ಡಿ.07 ರಂದು ಕುವೆಂಪು ರಂಗಮಂದಿರದಲ್ಲಿ ಹೈಡ್ರಾಮವೇ ನಡೆದುಹೋಗಿತ್ತು. ಈ ವೇಳೆ ಫಲಾನುಭವಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಆಯುಕ್ತರನ್ನ ಘೇರಾವ್ ಹಾಕಿದ್ದರು.
ಈಗ ಎಂಎಲ್ ಸಿ ಬಲ್ಕಿಸ್ ಭಾನು, ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್, ವಿಶ್ವನಾಥ್ ಕಾಶಿ, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ್ದ ನಿಯೋಗ ಸಚಿವ ಜಮೀರ್ ಅಹಮದ್ ಅವರನ್ನ ಭೇಟಿ ಮಾಡಿ ಆಶ್ರಯ ಮನೆಗಳ ಹಂಚಿಕೆಗೆ ದಿನಾಂಕ ಫೀಕ್ಸ್ ಮಾಡಿದ್ದಾರೆ.
ಸಚಿವ ಜಮೀರ್ ಅಹಮದ್ ಜ.21 ರಂದು 652 ಮನೆಗಳ ಹಂಚಿಕೆಗೆ ದಿನಾಂಕ ಫಿಕ್ಸ್ ಮಾಡಿಕಳುಹಿಸಿದ್ದಾರೆ. ಮೆಸ್ಕಾನಲ್ಲಿ 13 ಕೋಟಿ ಹಣ ಕಟ್ಟಲು ಸಚಿವರು ಭರವಸೆ ನೀಡಿದ್ದಾರೆ. ಈ ಬೆನ್ನಲ್ಲೇ ಬಡವರ ಕನಸಿನ ಮನೆಯ ಹಂಚಿಕೆ ನನಸಾಗಲಿದೆ.
ಈ ಹಿಂದೆ 624 ಮನೆ ಹಂಚಲಾಗಿತ್ತು. ಈಗ 652 ಮನೆ ಹಂಚಿಕೆಯಾಗುತ್ತಿದೆ. ಸಚಿವ ಜಮೀರ್ ಅಹಮದ್ ಅವರೇ ಶಿವಮೊಗ್ಗಕ್ಕೆ ಬರುವ ನಿರೀಕ್ಷೆಯಿದ್ದು ಅವರ ಮೂಲಕವೇ ಲಾಟರಿ ಎತ್ತಿ ಮನೆ ಹಂಚುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
إرسال تعليق