ಪಾಲಿಕೆ ಹಗಲು ದರೋಡೆಗೆ ನಿಂತಿದೆ. ಇಲ್ಲಿನ ಅಧಿಕಾರಿಗಳಿಗೆ ಒಂದು ಹೆಸರಿದೆ-ಕೆ.ಬಿ.ಪ್ರಸನ್ನ ಕುಮಾರ್

 

ನಗರ ಪಾಲಿಕೆಯಲ್ಲಿ ಕೆಲಸಕ್ಕಾಗಿ ಹೋಗುವ ಸಾರ್ವಜನಿಕರಿಗೆ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ ಪ್ರಸನ್ನ‌ಕುಮಾರ್‌ ಆರೋಪಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚ ನೀಡದೆ ಕೆಲಸ ಆಗೊಲ್ಲ. ಎಇಇ ಗೆ ಕೊಕ್ಕೆ ಎಇಇ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಏನಿದು ಕೊಕ್ಕೆ ಎಇಇ ಎಂದು ಕೇಳಿದರು. ಒಬ್ಬೊಬ್ಬರಿಗೆ ಒಂದೊಂದು ಹೆಸರು ಇದೆ. ಇ ಸ್ವತ್ತಿಗಾಗಿ ಅಲೆದಾಡುವಂತಾಗಿದೆ. ಪ್ರಾಪರ್ಟಿ ಕಾರ್ಡ್ ನಲ್ಲಿ ಬೇಕಾದ ದಾಖಲಾತಿಗಳನ್ನ ಇ ಸ್ವತ್ತಿಗೆ ನೀಡಲಾಗುತ್ತದೆ. ಪ್ರಾಪರ್ಟಿ ಕಾರ್ಡ್ ಗೆ ನೀಡಿದ ದಾಖಲಾತಿಯನ್ನ ನೀಡಿದರೆ ಪಾಲಿಕೆ ಇಸ್ವತ್ತು ನೀಡಲು ಆಗೊಲ್ವಾ ಎಂದು ದೂರಿದರು.


ಟೇಪ್ ಹಿಡಿದು ಬರುವ ಸರ್ವೆಯರ್ ಅವರು ಹೆಚ್ಚುಕಡಿಮೆ ಆದರೆ ಮೇಲ್ಗಡೆಯವರಿಗೆ ಕೊಡಬೇಕು ಎಂದು ಹೇಳುತ್ತಾರೆ. ಮೇಲಧಿಕಾರಿಗಳು ಆಯುಕ್ತರು ಮತ್ತು ಪ್ರಾದೇಶಿಕ ಅಧಿಕಾರಿಗಳು ಬರುತ್ತಾರೆ. ಇವರ ಹೆಸರು ಹೇಳಿಕೊಂಡು ಪಾಲಿಕೆ ಸಿಬ್ಬಂದಿಗಳು ಸುಲಿಗೆಗೆ ಇಳಿದಿದ್ದಾರೆ ಎಂದು ದೂರಿದರು. 


ವಾರಕ್ಕೊಮ್ಮೆ ಆಯುಕ್ತರು ಸಿಟಿ ರೌಂಡ್ಸ್ ಮಾಡಬೇಕು. ಗುಂಡಿಗಳು ಹೆಚ್ಚಾಗಿವೆ. ಇ-ಸ್ವತ್ತುಗೆ ಹೋದವನೆ ಆತ ಏಜೆಂಟ್ ಆಗುವ ವ್ಯವಸ್ಥೆ ನಿರ್ಮಾಣವಾಗಿದೆ. ಡಿಸಿಗಳು ಗಮನ ಹರಿಸಬೇಕು. ಜನರ ರಕ್ತ ಹೀರುವುದು ಕಡಿಮೆಯಾಗಬೇಕು ಎಂದು ಅವರು ಒತ್ತಾಯಿಸಿದರು. 


ನಗರ ಸಾರಿಗೆ ಬಸ್ ಕೆಎಸ್ಆರ್ ಟಿಸಿ ಬಸ್ ಗಳು ಇಲ್ಲವಾಗಿದೆ. ಇವತ್ತು ಇದ್ದಿದ್ದರೆ ಮಹಿಳೆಯರು ಉಚಿತವಾಗಿ ಓಡಾಡಬಹುದಾಗಿದೆ. 40 ನಗರ ಸಾರಿಗೆ ಬಸ್ ಗಳನ್ನ ಶಿವಮೊಗ್ಗಕ್ಕೆ ತರಲಾಗಿತ್ತು. ಒಂದು ವೇಳೆ ನಗರ ಸಾರಿಗೆ ಆರಂಭಿಸದಿದ್ದರೆ ಕೆಎಸ್ಆರ್ ಟಿಸಿ ವಿಭಾಗೀಯ ಕಚೇರಿಯನ್ನ‌ ಜೆಡಿಎಸ್ ಪಕ್ಷ ಮುತ್ತಿಗೆ ಹಾಕಲಿದೆ ಎಂದರು. 


ನಗರ ಸಾರಿಗೆ ಬಸ್ ಗೂ ಖಾಸಗಿ ಬಸ್ ನವರ ಜೊತೆ ಹೊಂದಾಣಿಕೆ ಏನಾದರೂ ಇದೆಯಾ ಎಂದು ಪ್ರಶ್ನಿಸಿದ ಮಾಜಿ ಶಾಸಕರು KSRTC ಬಸ್ ಬಿಡದಿದ್ದರೆ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ದೂರಿದರು. 

Post a Comment

أحدث أقدم