ಹಿರಿಯರಿಗೆ ಆಯುಷ್ ಮಾನ್ ಕಾರ್ಡ್ ಹಂಚಿಕೆ

 

ಸೀನಿಯರ್ ಚೇಂಬರ್ ನ್ಯಾಷನಲ್ ಶಿವಮೊಗ್ಗ ಲೆಜಿನ್ ಇವರ ಸ ಹಯೋಗದಲ್ಲಿ ಎಪ್ಪತ್ತು ವರ್ಷ ಮೇಲ್ಪಟ್ಟ ಹಿರಿಯರಿಗೆ ಜನವರಿ 16 ಬೆಳಿಗ್ಗೆ 10:00 ಗಂಟೆಗೆ ಉಚಿತ ಆಯುಷ್ಮಾನ್ ಕಾರ್ಡನ್ನು ವಿತರಿಸಲಾಗುವುದು ಎಂದು ಮೈಸೂರು ಬ್ಯಾಂಕ್ ನಿವೃತ್ತ ಸಂಘದ ಅಧ್ಯಕ್ಷರಾದ ಕೆ ಟಿ ಶ್ರೀನಿವಾಸ್ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಡಿಸೆಂಬರ್ 24 2024 ರಂದು ಸೀನಿಯರ್ ಚೇಂಬರ್ ನ್ಯಾಷನಲ್ ಶಿವಮೊಗ್ಗ ಲೇಜಿನ್ ಸಯೋಗದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯರಿಗೆ ಆಯುಷ್ಮಾನ್ ಕಾರ್ಡ್ ಗೆ ನೊಂದಣಿ ಮಾಡಿ ಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಆ ಕಾರ್ಯಕ್ರಮಕ್ಕೆ ಸಂಸದರದ ಬಿ ವೈ ರಾಘವೇಂದ್ರ ಅವರು ನೀಡಿದ್ದರು. ಆ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಹೆಚ್ಚು ಹಿರಿಯರು ಆಯುಷ್ಮಾನ್ ಕಾರ್ಡ್ ಬೇಕೆಂದು ನೋಂದಾಯಿಸಿಕೊಂಡಿದ್ದರು. ಆದ್ದರಿಂದ ಆ ಕಾರ್ಡ್ ನ್ನು ಜನವರಿ 16ರಂದು ವಿತರಿಸುತಿದ್ದೇವೆ ಹಾಗೆಯೇ ಆ ಕಾರ್ಯಕ್ರಮವನ್ನು ಸಂಸದರಾದ ಬಿವೈ ರಾಘವೇಂದ್ರ ಅವರು ಉದ್ಘಾಟಿಸಲಿದ್ದಾರೆ ಎಂದರು.

Post a Comment

أحدث أقدم