ಜಿಕ್ರುಲ್ಲಾ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

 

ಜಿಕ್ರುಲ್ಲಾ ಕೊಲೆ ಆರೋಪಿಗಳಿಗೆ ಶಿವಮೊಗ್ಗದ ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ, ತಲಾ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 


ಹೊಸಳ್ಳಿಯ ಕಾರ್ ಮೆಕಾನಿಕ್ ಜಿಕ್ರುಲ್ಲಾ, (28) ಶಿವಮೊಗ್ಗ ಟೌನ್ ನ ಬುದ್ದಾ ನಗರದಲ್ಲಿ ಕಾರ್ ಪಾರ್ಕಿಂಗ್ ಮಾಡುವ ವಿಚಾರವಾಗಿ ಗ್ಯಾಸ್ ಇಮ್ರಾನ್ ನೊಂದಿಗೆ ಜಗಳ ಮಾಡಿಕೊಂಡಿದ್ದನು. ಹಾಗೂ ಈ ಹಿಂದೆ ಟ್ವಿಸ್ಟ್ ಇಮ್ರಾನ್ ನೊಂದಿಗೂ ಗಲಾಟೆ ಮಾಡಿಕೊಂಡಿದ್ದನು.   


ಈ ದ್ವೇಶದ ಹಿನ್ನೆಲೆಯಲ್ಲಿ ದಿನಾಂಕಃ 19-03-2022 ರಂದು ರಾತ್ರಿ ಎನ್ ಟಿ ರಸ್ತೆ ಫಲಕ್ ಶಾದಿ ಮಹಲ್ ಪಕ್ಕ ರಸ್ತೆಯಲ್ಲಿ ಜಿಕ್ರುಲ್ಲಾ ನು ತನ್ನ ಸ್ನೇಹಿತರೊಂದಿಗೆ ಮಾತನಾಡಿಕೊಂಡು ನಿಂತಿದ್ದಾಗ ಶಹಬಾಜ್, ರುಮಾನ್, ವಸೀಂ, ಕಾಲಾ ವಸೀಂ, ನಬೀಲ್ @ ಗಜ ಹಾಗೂ ಇತರರು ಸೇರಿಕೊಂಡು, ಹರಿತವಾದ ಆಯುಧದಿಂದ ಜಿಕ್ರುಲ್ಲಾ ನ ಮೈಕೈ ಗೆ ಚುಚ್ಚಿ, ತಲೆಗೆ ಹೊಡೆದು ತೀವ್ರ ಸ್ವರೂಪದ ಮಾರಣಾಂತಿಕ ಹಲ್ಲೆ ಮಾಡಿದ್ದನು.


ಜಿಕ್ರುಲ್ಲಾ ನನ್ನು ಕೂಡಲೇ ಚಿಕಿತ್ಸೆಗೆಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕಃ 20-03-2022 ರಂದು ಮೃತ ಪಟ್ಟಿದ್ದನು. ಜಿಕ್ರುಲ್ಲಾ ನನ್ನು ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.‌ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. 


ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಅಂಜನ್ ಕುಮಾರ್, ಪಿ. ಐ. ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನ ಸಲ್ಲಿಸಿದ್ದರು.


ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ಓ. ಪುಷ್ಪಾ ವಾದ ಮಂಡಿಸಿದ್ದು, ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ಆರೋಪಿಗಳಾದ 1) ಶಹಬಾಜ್ ಶರೀಫ್, 20 ವರ್ಷ, ಮಿಳ್ಳಘಟ್ಟ, ಶಿವಮೊಗ್ಗ ಟೌನ್, 2) ವಸೀಂ ಅಕ್ರಂ @ ಚೆ ಉಂಗ್ಲಿ, 20 ವರ್ಷ, ಟೆಂಪೋ ಸ್ಟಾಂಡ್, ಶಿವಮೊಗ್ಗ ಟೌನ್, 3) ವಸೀಂ ಅಕ್ರಮ @ ಕಾಲಾ ವಸೀಂ, 20 ವರ್ಷ, ಬುದ್ದಾ ನಗರ, ಶಿವಮೊಗ್ಗ ಟೌನ್ ಮತ್ತು 4) ಫಯಾಜ್ ಉಲ್ಲಾ ರೆಹಮಾನ್ @ ರುಮಾನ್, 23 ವರ್ಷ, ಮುರಾದ್ ನಗರ ಇವರುಗಳ ವಿರುದ್ಧ ಆರೋಪ ದೃಡಪಟ್ಟಿತ್ತು.  


ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಪಲ್ಲವಿ ಬಿ.ಆರ್ ರವರು ದಿನಾಂಕ:- 16-01-2025 ರಂದು ನಾಲ್ಕೂ ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.

Post a Comment

أحدث أقدم