ವಿವಿಯ ಭ್ರಷ್ಠ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ಎಬಿವಿಪಿ ಮನವಿ



 ಕುವೆಂಪು ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ ಎಸಗಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟ ಮಾಡುತ್ತಿರುವ ಕುಲಸಚಿವ ಆಡಳಿತರಾದ ಶ್ರೀ ಎ.ಎಲ್. ಮಂಜುನಾಥ್ (ಕೆ.ಎ.ಎಸ್) ಹಾಗೂ ಕುಲಸಚಿವ ಪರೀಕ್ಷಾಂಗ ಪ್ರೊ. ಎಸ್.ಎಂ. ಗೋಪಿನಾಥ್ ಇವರನ್ನು 


ಅಮಾನತ್ತುಗೊಳಿಸಿ ತನಿಖೆ ನಡೆಸುವಂತೆ ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ನೇತೃತ್ವದಲ್ಲಿ ರಾಜ್ಯಪಾಲ ಥೆವಾರ್ ಚಂದ್ ಗೆಹ್ಲೋಟ್ ಗೆ ಮನವಿ ಮಾಡಲಾಯಿತು.


ಕುವೆಂಪು ವಿಶ್ವ ವಿದ್ಯಾಲಯದಲ್ಲಿ ದೂರಶಿಕ್ಷಣ ಪ್ರವೇಶಾತಿಗಳನ್ನ ಎಲ್ ಎಂ ಎಸ್ ತಂತ್ರಾಂಶ ಅಳವಡಿಸಿಕೊಳ್ಳಲು ತೀರ್ಮಾನಿಸಿ ಬರಂಳೂರಿನ ಫೆಮೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾದಾಗ ಸಂಸ್ಥೆಯು 1 ಕೋಟಿ 35 ಲಕ್ಷ ಕೋಟ್ ಮಾಡಿತ್ತು. ಇದನ್ನ ಹಣಕಾಸು ವಿಭಾಗ ಆಕ್ಷೇಪಿಸಿತ್ತು. 


ಹಿಂದಿನ ಅಧಿಕಾರಿ ಲೋಖಂಡೆ ಅವರು ಕುಲಪತಿಯಾಗಿದ್ದಾಗ ಸಿಂಡಿಕೇಟ್ ಸಭೆ ನಡೆಸಿ ಉಪಕರಣಗಳನ್ನ 25 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲು ತೀರ್ಮಾನಿಸಲಾಗಿತ್ತು. ತೀರ್ಮಾನ ತೆಗೆದುಕೊಂಡ ಸ್ವಲ್ಪ ದಿನಗಳ ಬಳಿಕ ಲೋಖಂಡೆಯವರನ್ನ ವರ್ಗಾಯಿಸಲಾಯಿತು. ಆಗ ಮತ್ತೆ ಇದೇ ಸಿಂಡಿಕೇಟ್ ನಲ್ಲಿದ್ದ ಮಂಜುನಾಥ್ ಅವರು ಗೋಪಿನಾಥ್ ಅವರ ಜೊತೆ ಸೇರಿ 25 ಲಕ್ಷದಿಂದ 96 ಲಕ್ಷಕ್ಕೆ ಏರಿಸಲಾಯಿತು.


ಇದರಿಂದ ವಿವಿಯ ಬೊಕ್ಕಸಕ್ಕೆ ಹೊರೆ‌ಮಾಡಲಾಗಿದೆ. ಅಧ್ಯಾಯನ ಕೇಂದ್ರಗಳ ಮೂಲಕ ದೂರ ಶಿಕ್ಷಣ ಪ್ರವೇಶಾತಿಗಳನ್ನ ನಡೆಸಲಾಗುತ್ತಿತ್ತು. ದೂರ ಶಿಕ್ಷಣ ಬಂದಾಗಿನಿಂದ ಬಾಕಿ ಉಳಿಸಿಕೊಂಡ ಅಧ್ಯಾಯನ ಕೇಂದ್ರಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಬದಲು ಗೋಪಿನಾಥ್ ಮತ್ತು‌ ಮಂಜುನಾಥ್ ಅವರು ಶಾಮೀಲಾಗಿ ಅಂಕಪಟ್ಟಿ ವಿತರಿಸಿದ್ದಾರೆ. ಇವರುಗಳೆ ಫೆಮೆ ಸಂಸ್ಥೆಯ ಮುಖ್ಯಸ್ಥರಾಗಿ ಅವರ ಮೂಲಕ ಎಂ ಎಸ್ ಎಲ್ ತಂತ್ರಾಂಶ ಅಳವಡಿಕೆಗೆ ಮುಂದಾಗಿದ್ದಾರೆ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. 


ಯುಯುಸಿ ಎಂ ಎಸ್ ಅಳವಡಿಕೆ ಮಾಡಿಕೊಳ್ಳದೆ ನಿರ್ಲಕ್ಷ ತೋರಿಸಿರುವುದು ಸೇರಿದಂತೆ 10 ಸಮಸ್ಯೆಗಳ ಬಗ್ಗೆ ಸಂಘಟನೆ ರಾಜ್ಯಪಾಲರ ಗಮನ ಸೆಳೆದಿದೆ. 

Post a Comment

أحدث أقدم