ಮತದಾರರ ಪಟ್ಟಿಯಲ್ಲಿ ಮೃತರ ಹೆಸರು-ಮರಿಯಪ್ಪ ಹೇಳಿದ್ದೇನು?

 

ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಆಯ್ಕೆಯಾದ ನೂತನ ತಂಡವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ ಎಂದು ನಿರ್ದೇಶಕ ಎಸ್.ಕೆ. ಮರಿಯಪ್ಪ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಗೆ ತನ್ನದೇ ಆದ ಇತಿಹಾಸವಿದೆ. ೧೯೨೪ರಲ್ಲಿ ಇದು ಆರಂಭವಾಯಿತು. ಆ ಹಿರಿಯರ ತಂಡದಲ್ಲಿ ನಾನು ಸೇರಿದಂತೆ ಹಲವರಿದ್ದೆವು. ನಿವೇಶನಗಳನ್ನು ನೀಡುವ ದೃಷ್ಟಿಯಿಂದ ಆರಂಭವಾದ ಈ ಸೊಸೈಟಿಯಿಂದ ಷೇರುದಾರರಿಗೆ ನಿವೇಶನ ನೀಡುವಲ್ಲಿ, ಹೊಸ ಬಡಾವಣೆಗಳನ್ನು ಸೃಷ್ಟಿಸುವಲ್ಲಿ ಉತ್ತಮ ಕೆಲಸ ಮಾಡಿದೆ ಎಂದರು.


ಗಾಂಧಿನಗರ, ರಾಜೇಂದ್ರ ನಗರ, ಇಂದಿರಾ ನಗರ ಸೇರಿದಂತೆ ಅನೇಕ ನೂತನ ಬಡಾವಣೆಗಳನ್ನು ಮಾಡಿದ್ದೆವು. ಆಗ ಕೇವಲ ೫೦ ಸಾವಿರಕ್ಕಿಂತ ಕಡಿಮೆ ಹಣಕ್ಕೆ ನಿವೇಶನ ನೀಡಿದ್ದೆವು. ಒತ್ತುವರಿ ತಪ್ಪಿಸಲು ಉಳಿದ ಜಾಗಗಳನ್ನು ಹರಾಜು ಕೂಡ ಮಾಡಿದ್ದೆವು. ಈ ಹರಾಜಿನಿಂದ ೨.೭೫ ಕೋಟಿ ರೂ. ಬಂದಿದ್ದು, ಅದರಲ್ಲಿ ೭೫ ಲಕ್ಷ ರೂ. ತೆರಿಗೆಯನ್ನೇ ಕಟ್ಟಿದ್ದೇವೆ. ಈ ಹಣದಲ್ಲಿ ಒಂದು ಫ್ಲಾö್ಯಟ್ ನಿರ್ಮಾಣ ಮಾಡಬೇಕಿದೆ. ಇನ್ನಾರು ತಿಂಗಳಲ್ಲಿ ಇದನ್ನು ಮುಗಿಸುತ್ತೇವೆ ಎಂದರು.


ಹೊಸ ಕಟ್ಟಡ ನಿರ್ಮಿಸಿ ಮೆಟ್ರೋ ಆಸ್ಪತ್ರೆಗೆ ಬಾಡಿಗೆ ನೀಡಿದ್ದೇವೆ. ಅದು ನಿರಂತರ ಆದಾಯ ತರುತ್ತಿದೆ. ಇವೆಲ್ಲವನ್ನೂ ಸ್ವಂತ ಹಣದಲ್ಲೇ ಮಾಡಿದ್ದೇವೆ. ಸದಸ್ಯರಿಗೆ ಸಾಲದ ಮಿತಿಯನ್ನು ಹೆಚ್ಚಿಸಿದ್ದೇವೆ. ಮನೆ ಕಟ್ಟಲು ೩೦ ಲಕ್ಷ ರೂ.ವರೆಗೆ ಸಾಲ ನೀಡುತ್ತೇವೆ. ಲಾಭಾಂಶವನ್ನು ಶೇ. ೫ರಿಂದ ಈಗ ಶೇ. ೧೫ಕ್ಕೆ ಹೆಚ್ಚಿಸಿದ್ದೇವೆ. ಹೀಗೆ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಶಿವಮೊಗ್ಗದಲ್ಲಿಯೇ ಮಾದರಿ ಸೊಸೈಟಿಯಾಗಿ ಬೆಳೆದು ನಿಂತಿದೆ. ಇವೆಲ್ಲವನ್ನೂ ನಮ್ಮ ಹಳೆಯ ತಂಡವೇ ಮಾಡಿದೆ. ಈಗ ಹಳೆಯ ತಂಡದಿAದಲೇ ೯ ಜನರನ್ನು ಸದಸ್ಯರು ಗೆಲ್ಲಿಸಿದ್ದಾರೆ. ಅವರ ಸಹಕಾರದಿಂದ ಮತ್ತೆ ನೂತನವಾಗಿ ಆಯ್ಕೆಯಾದ ಎಲ್ಲರ ಸಹಕಾರದೊಂದಿಗೆ ಸೊಸೈಟಿಯನ್ನು ಮತ್ತಷ್ಟು ಬೆಳೆಸುತ್ತೇವೆ. ನಮ್ಮನ್ನು ಗೆಲ್ಲಿಸಿದ ಸದಸ್ಯರಿಗೆ ಧನ್ಯವಾದಗಳು ಎಂದರು.


ಮತದಾರರ ಪಟ್ಟಿಯಲ್ಲಿ ಮೃತರ ಹೆಸರುಗಳು ಹೇಗೆ ಸೇರಿದವು ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು ಇದು ಅಧಿಕಾರಿಗಳಿಂದ ಆದ ತಪ್ಪಾಗಿದೆ. ಮೃತಪಟ್ಟವರ ಹೆಸರನ್ನು ರೌಂಡ್ ಮಾಡಲಾಗಿತ್ತು. ಅವರ ಹೆಸರಿನಲ್ಲಿ ಯಾರೂ ಮತ ಹಾಕಿಲ್ಲ. ಕೆಲವರು ತಮ್ಮ ಕುಟುಂಬದವರ ಮೃತರ ಮಾಹಿತಿಯನ್ನು ನೀಡಿರಲಿಲ್ಲ. ಅದನ್ನು ಸರಿಪಡಿಸಲಾಗುವುದು ಎಂದರು. 


ಪತ್ರಿಕಾಗೋಷ್ಠಿಯಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರಾದ ಡಾ. ಶ್ರೀನಿವಾಸ ಕರಿಯಣ್ಣ, ಕೆ. ರಂಗನಾಥ್, ಎಸ್.ಪಿ. ಶೇಷಾದ್ರಿ, ನಿರ್ಮಲಾ ಕಾಶಿ, ಸಿ. ಹೊನ್ನಪ್ಪ, ನಟರಾಜ್ ಶಾಸ್ತಿç, ಎಂ. ಪ್ರವೀಣ್ ಕುಮಾರ್, ರಾಘವೇಂದ್ರ ಇದ್ದರು.

Post a Comment

أحدث أقدم