ಪಿಎಸ್ಐ ವಿರುದ್ಧ ಕಾರ್ಮಿಕರ ಪ್ರತಿಭಟನೆ

 

ಪಿಎಸ್ಐ ತಿರುಮಲೆಶ್ ವಿರುದ್ಧದ ಪ್ರತಿಭಟನೆ ಮುಂದುವರೆದಿದೆ. ಇಂದು ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. 


ಶಿವಮೊಗ್ಗದಲ್ಲಿ ಬಸ್ ನ ಕರ್ಕಶ ಶಬ್ದವನ್ನ‌ನಿಯಂತ್ರಿಸಲು ಮುಂದಾಗಿ ಚಾಲಕರನ್ನ ಅವಮಾನಿಸಿ ಪಿಎಸ್ಐ ತಿರುಮಲೇಶ್ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು. ಈ ಬಗ್ಗೆ ಸಂಘಟನೆ ಎಸ್ಪಿ ಅವರಿಗೆ ಮನವಿ ಸಲ್ಲಿಸಿ ಕ್ರಮ‌ಕ್ಕೆ ಅಗ್ರಹಿಸಿದ್ದರು. 


ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘಟನೆ ಪಿಎಸ್ಐ ತಿರುಮಲೇಶ್ ಸ್ಥಳಕ್ಕೆ ಬಂದು ಕಾರ್ಮಿಕರ ಕ್ಷಮೆ ಕೇಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪಿಎಸ್ಐ ವಿರುದ್ಧ ದಿಕ್ಕಾರದ ಘೋಷಣೆ ಕೂಗಲಾಗಿದೆ. ಬರಲೇ ಬೇಕು ಬರಲೇಬೇಕು ಸ್ಥಳಕ್ಕೆ ಪಿಎಸ್ಐ ಬರಲೇ ಬೇಕು ಎಂಬ ಘೋಷಣೆ ಮುಗಿಲುಮುಟ್ಟಿದೆ. 


ಬಸ್ ಮಾಲೀಕರ ಕೊಡುವ ದಿನಗೂಲಿ ಹಣಕ್ಕೆ ಕೆಲಸ ಮಾಡುವವರನ್ನ ಸಾರ್ವಜನಿಕವಾಗಿ ಅವಮಾನಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಘನತೆ ಗೌರವ ಇರುತ್ತದೆ. ಚಾಲಕರನ್ನ ಕೀಳು ಭಾವನೆಯಿಂದ ನೋಡಿ ಅವಮಾನಿಸಿರುವ ತಿರುಮಲೇಶ್ ವಿರುದ್ಧ ಕ್ರಮ ಜರುಗಿಸಿನ್ಯಾಯ ಒಸಗಿಸುವಂತೆ ಸಙಘಟನೆ ಆಗ್ರಹಿಸಿದೆ. 


ಈ ವೇಳೆ ಮಾಜಿ ಡಿಸಿಎಂ ಈಶ್ವರಪ್ಪ ಸಹ ಸ್ಥಳಕ್ಕೆ ಧಾವಿಸಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಪಿಎಸ್ಐ ಜೊತೆ ಮಾತನಾಡಿದ್ದೆ. ಆದರೆ ಈ ಪ್ರತಿಭಟನೆ ನೋಡಿದರೆ ಇದು ಸಮಾಧಾನವಾದಂತೆ ಕಾಣುತ್ತಿಲ್ಲ. ಹೋರಾಟ ಮುಂದುವರೆಸಿ ನಿಮ್ಮ‌ಬೆಂಬಲಕ್ಕೆ ನಾನಿದ್ದೇನೆ ಎಂದು ಭರವಸೆ ನೀಡಿದರು. 


ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಹೆಚ್ ಸತೀಶ್ (ದೇವು), ರಾಜ್ಯ ಉಪಾಧ್ಯಕ್ಷ ಶಿವಪ್ಪ ಹೆಚ್ ತಿಪಟೂರು, ಶಿವರಾಜ್ ಎಂ, ಡಾ.ಎಸ್ ಕೃಷ್ಣ ಭದ್ರಾವತಿ, ಅಣ್ಣಪ್ಪ, ಗೋಪಿ, ಜಗನ್ನಾಥ್ ಮೊದಲಾದವರು ಉಪಸ್ಥಿತರಿದ್ದರು. 

Post a Comment

أحدث أقدم