ಶಿವಮೊಗ್ಗದಲ್ಲಿ ಇ-ಸ್ವತ್ತು ಪಡೆಯಲು ವಿಳಂಭವಾಗುತ್ತಿರುವ(Late) ಬೆನ್ನಲ್ಲೇ ಶಾಸಕ ಚೆನ್ನ ಬಸಪ್ಪ ಅವರ ನೆತೃತ್ವದಲ್ಲಿ ಸಭೆ(Meeting) ನಡೆದಿದೆ. ಸಭೆಯಲ್ಲಿ ಶಾಸಕರಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್ ಸಾಥ್ ನೀಡಿದ್ದಾರೆ.
ಆರಂಭದಲ್ಲಿ ಮಾತನಾಡಿದ ಶಾಸಕ ಚೆನ್ನಬಸಪ್ಪ ಈ ಹಿಂದೆ ಮೈಸೂರು, ಶಿವಮೊಗ್ಗ, ತುಮಕೂರು ಸೇರಿ ಪ್ರಾಪರ್ಟಿ ಕಾರ್ಡ್ ಮಾಡಿತ್ತು. ಅದರಲ್ಲಿ ಎಲ್ಲಾ ದಾಖಲೆ ಇದೆ. ಅದನ್ನು ತರಿಸಿಕೊಳ್ಳಿ. ಸಹಾಯ ಆಗುತ್ತದೆ. ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ ಎಂದಿದ್ದಾರೆ.
ಜನರಿಗೆ ಆತಂಕ ಇದೆ. ಸಿಸ್ಟಮ್ ಸರಿ ಇದೆ. ಅನುಷ್ಠಾನಕ್ಕೆ ತಡ ಆಗುತ್ತಿದೆ. ಮಾಡದೇ ಇರುವುದರಿಂದ ಸಮರೋಪಾದಿ ಮಾಡಿ. 1.07 ಲಕ್ಷ ಮನೆಗಳಿಗೆ ಭೇಟಿ ಕೊಡಬೇಕಿತ್ತು. ನಿಗದಿತ ದಿನಾಂಕ ಘೋಷಣೆ ಮಾಡಬೇಕು. 1.07 ಲಕ್ಷ ಸ್ವತ್ತು ಇ-ಖಾತೆ ಮಾಡಲು ಎಷ್ಟು ಸಮಯ ಬೇಕು? ಬಿ ಖಾತೆ ಮಾಡಿ ಆಗಿದೆ. ಸರಿ ಇರುವುದಕ್ಕೆ ಲಾಂಗ್ ಪ್ರೋಸೆಸ್ ಮಾಡಬಾರದು ಎಂದು ಶಾಸಕರು ಸಭೆಗೆ ತಿಳಿಸಿದರು.
ಕೆಲವರು ಸಾಲ ಮಾಡಿರುತ್ತಾರೆ. ಅದಕ್ಕೆ ಇಸಿ ಕೇಳುತ್ತಿದ್ದೇವೆ. ಸಮರೋಪಾದಿ ಆಗಲು ದಾಖಲೆ ಬರಬೇಕು. ಸಿಂಗಲ್ ವಿಂಡೋ ಮಾಡಿದರೆ ಇ ಸ್ವತ್ತು ಆಗುತ್ತದೆ. ಜನ ಅರ್ಜಿ ಹಾಕಿ, ಹದಿಮೂರು ದಾಖಲೆಗೆ ಅಲೆದಾಡಬಾರದು. ನಾಗರೀಕರಿಗೆ ತೊಂದರೆ ಆಗಬಾರದು ಎಂಬುದು ಶಾಸಕರ ಕಾಳಜಿಯಾಗಿದೆ.
ಮತಗಟ್ಟೆ ಜಾಗ ಗುರುತಿಸಿ. ವಾರ್ಡ್ ವಾರು ದಾಖಲೆ ಸಂಗ್ರಹ ಮಾಡಿ. 300 ಮತಗಟ್ಟೆ ಇದ್ದಾವೆ. ತಕ್ಷಣ ಕೆಲಸ ಆಗಬೇಕು. ಒಂದೇ ದಿನ 300 ಬೂತ್ ಗಳಲ್ಲಿ ಕೆಲಸ ಆಗಬೇಕು ಎಂದರು. ಇದಕ್ಕೆ ಅಧಿಕಾರಿ ನಾಗೇಂದ್ರ ಮಾತನಾಡಿ, ಮೂರು ನಾಲ್ಕು ಕೈ ಬದಲಾವಣೆಯಿಂದಾಗಿ ಇಸಿ ಬೇಕಾಗಿದೆ. ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಆನ್ ಲೈನ್ ಅರ್ಜಿ ತುಂಬುವ ಅವಕಾಶ ಸಿಗಲಿದೆ ಎಂದರು.
ಡಿ.ಎಸ್.ಅರುಣ್ ಮಾತನಾಡಿ, ಪ್ರಾಪರ್ಟಿ ಟ್ಯಾಕ್ಸ್ ಆ್ಯಪ್ ಆಗಿಲ್ಲ. ಟ್ರೇಡ್ ಲೈಸೆನ್ಸ್ ಆ್ಯಪ್ ಇನ್ನೂ ಆಗಿಲ್ಲ. ಸರಳವಾಗಿ ಆ್ಯಪ್ ರೂಪಿಸಬಹುದು. ನಿಗಮ ಮಂಡಳಿ ಆ್ಯಪ್ ಮಾಡಿದ್ದೇವೆ. ಆ್ಯಪ್ ಮಾಡಿದ ನಂತರ ಪಾಲಿಕೆಗೆ ಜನರು ಪುನಃ ಓಡಾಡುವ ಹಾಗೆ ಆಗಬಾರದು ಎಂದರು.
ಕವಿತಾ ಯೋಗಪ್ಪನವರ್ ಮಾತನಾಡಿ, ಇನ್ನೂ ಹದಿನೈದು ದಿನದಲ್ಲಿ ಮೂರು ವಲಯ ಕಚೇರಿ ಆರಂಭ ಆಗಲಿದೆ. ಆಗ ಇ ಸ್ವತ್ತು ಸುಲಭ ಆಗಲಿದೆ .ಜನವರಿ 22 ರ ಸುಮಾರಿಗೆ ಉದ್ಘಾಟನೆ ಆಗಲಿದೆ ಎಂದರು.
ಈ ನಡುವೆ ನಾಗೇಂದ್ರ ಮಾತನಾಡಿ ಒಂದು ಅರ್ಜಿ ಬಂದರೆ 30 ಪುಟಗಳ ದಾಖಲಾತಿ ಸ್ಕ್ಯಾನ್ ಆಗಬೇಕು 30 ಪುಟದ ಸ್ಕ್ಯಾನ್ ಮಾಡಿ ಅಪಲೋಡ್ ಮಾಡಲು ಕನಿಷ್ಠ 15 ರಿಂದ 2 ನಿಮಿಷ ಬೇಕು. ಅದು ಸಹ ಅಂತರ್ಜಾಲ ಸಲೀಸಾಗಿದ್ದರೆ ಇಷ್ಟು ಹೊತ್ತಾಗಲಿದೆ. ದಿನಕ್ಕೆ 100 ಅರ್ಜಿ ಇಂಟರ್ ನೆಟ್ ಸಲೀಸಾಗಿದ್ದರೆ ಅಲೋಡ್ ಮಾಡಬಹುದು. ಸಧ್ಯಕ್ಕೆ 2000 ಅರ್ಜಿ ಪೆಂಡಿಂಗ್ ಇದೆ ಎಂದರು.
ಚನ್ನಬಸಪ್ಪ ಮಾತನಾಡಿ, ಹೊಸದಾಗಿ ಅರ್ಜಿ ಕೊಡುವವರು ದಾಖಲಾತಿ ಪಿಡಿಎಫ್ ಕೊಡಲು ಹೇಳಿ. ಆಗ ಸಮಯ ಉಳಿತಾಯವಾಗಲಿದೆ. ಇ-ಸ್ವತ್ತು ಪಡೆಯುವುದು ಎಂದರೆ ಹಗರಣ ರೂಪ ಪಡೆದಿದೆ. ಇದನ್ನು ಸಹಿಸಲ್ಲ. ಅರ್ ಓ ಸೆಕ್ಷನ್ ಬಗ್ಗೆ ಗಂಭೀರ ಆರೋಪ ಇದೆ ಎಂದರು. ಕಮಿಷನ್ ಶೀಘ್ರದಲ್ಲಿಯೇ ಎಲ್ಲವೂ ನಿರಾಳವಾಗಲಿದೆ ಎಂದರು.
ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಪಾಲಿಕೆ ಆಯುಕ್ತೆ ಕವಿತಾ, ಉಪ ಆಯುಕ್ತ ತುಷಾರ್ ಹೊಸೂರು ಇನ್ನಿತರರು ಇದ್ದರು.
إرسال تعليق