ಹಳ್ಳ ಹಿಡಿದು ಹೋದ ಐ ಲವ್ ಶಿರಾಳಕೊಪ್ಪ ಪಾರ್ಕ್… ಪುರಸಭೆ ಬೇಜವಾಬ್ದಾರಿತನದಿಂದಾಗಿ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಳು ಸುರಿಯುತ್ತಿರುವ ಶಿರಾಳಕೊಪ್ಪದ ಐ ಲವ್ ಶಿರಾಳಕೊಪ್ಪ ಪಾರ್ಕ್.
ಶಿರಾಳಕೊಪ್ಪ ಪಟ್ಟಣದ ಬಸ್ಟ್ಯಾಂಡ್ ಸರ್ಕಲ್ ಹತ್ತಿರವಿರುವ ಪಾರ್ಕ್ 2022-23 ನೇ ಸಾಲಿನಲ್ಲಿ ಮಿನಿ ಪಾರ್ಕ್ ಆಗಿ ನಿರ್ಮಿಸಲಾಗಿತ್ತು. ನಿರ್ಮಾಣವಾದ ಕೇವಲ 2 ವರ್ಷ ಅವಧಿಯೊಳಗೆ ಹಾಳಾಗಿ ಹೋಗಿದೆ. ಸ್ಥಳೀಯ ಪುರಸಭೆಯ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ತನದಿಂದಾಗಿ ಪಾರ್ಕ್ ಸ್ಥಿತಿ ಕನ್ನಡಿ ಹಿಡಿದಂತಾಗಿದೆ.
ಪುರಸಭೆ ವ್ಯಾಪ್ತಿಗೆ ಒಳಪಟ್ಟ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿರುವ ಪಾರ್ಕ್ ನ ಸ್ಥಿತಿಕಂಡು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಲಕ್ಷಗಟ್ಟಲೆ ಹಣ ವ್ಯಯ ಮಾಡಿ ನಿರ್ಮಿಸಲಾಗಿದ್ದ ಪಾರ್ಕ್ ನಿರ್ವಹಣೆ ಇಲ್ಲದೆ ಹಾಳು ಸೋರುವಂತಾಗಿದೆ. ಮಹಿಳೆಯರು ಮತ್ತು ಮಕ್ಕಳ ಆಕರ್ಷಣೆಯ ತಾಣವಾಗಿದ್ದ ಮಿನಿ ಪಾರ್ಕ್ ನ ಸ್ಥಿತಿ ಕಂಡು ಸಾರ್ವಜನಿಕರಿಂದ ಬೇಸರ ವ್ಯಕ್ತವಾಗುತ್ತಿದೆ
ಮೂಲ ಸೌಂದರ್ಯ ಹಾಗೂ ನೈಜತೆಯನ್ನು ಕಳೆದುಕೊಂಡಿರುವ ಪಾರ್ಕ್ ನ ಅಭಿವೃದ್ಧಿಗೆ ಮುಂದಾಗುವಂತೆ ಸ್ಥಳೀಯ ಆಡಳಿತವನ್ನು ಸಾರ್ವಜನಿಕರು ಆಗ್ರಹಿಸಿದ್ದಾರೆ.
إرسال تعليق