ಗೋಹಂತಕನಿಗೆ ಕಠಿಣ ಶಿಕ್ಷೆ ವಿಧಿಸಲು ರಾಷ್ಟ್ರಭಕ್ತರ ಬಳಗ ಮತ್ತು ಅರ್ಚಕರ ವೃಂದ ಆಗ್ರಹ

 

ಚಾಮರಾಜ ಪೇಟೆಯಲ್ಲಿ ಗೋವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಇಂದು ರಾಷ್ಟ್ರಭಕ್ತರ ಬಳಗ ಡಿಸಿ ಕಚೇರಿಯಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ ಕಾಂತೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರೆ, ಅರ್ಚಕರ ವೃಂದ ಬೃಹತ್ ಬೈಕ್ ರ‌್ಯಾಲಿ ನಡೆಸಿದೆ. 


ಅರ್ಚಕರ ವೃಂದ ಸಾಂಪ್ರದಾಯಿಕ ಉಡುಗೆಯಲ್ಲಿ ಬೈಕ್ ಏರಿ ಗೋವುಗಳ ರಕ್ಷಣೆ ಕುರಿತು ಘೋಷಣೆ ಕೂಗಿಕೊಂಡು ಶಿವಮೊಗ್ಗದ ಶುಭಮಂಗಳ ಕಲ್ಯಾಣ ಮಂದಿರದಿಂದ ಡಿಸಿ ಕಚೇರಿಯ ವರೆಗೆ ರ‌್ಯಾಲಿ ನಡೆದಿದೆ. 


ಗೋಮಾತೆಯ ಕೆಚ್ಚಲು ಕುಯ್ದು ಕಾಲನ್ನು ಕಡಿದು ವಿಕೃತಿಯನ್ನು ಮೆರೆದಿದ್ದ ಯುವಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೆ ಗೋವುಗಳಿಗೆ ಸೂಕ್ತ ರಕ್ಷಣೆ ನೀಡಿ ಧುರುಳರನ್ನ ಬಙಧಿಸಬೇಕು. ರಾಜ್ಯದಲ್ಲಿ ಗೋ ಸಂರಕ್ಷಣೆಗೆ ಜಾರಿಯಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನ ಜಾರಿಗೊಳಿಸಬೇಕು ಎಂದು ಪದರತಿಭಟನಾಕಾರರು ಆಗ್ರಹಿಸಿದರು.  

ರಾಷ್ಟ್ರಭಕ್ತರ ಬಳಗವೂ ಸಹ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತರ ಭಾವನೆಗಳ ಜೊತೆ ರಾಜ್ಯ ಸರ್ಕಾರ ಆಟವಾಡಲು ಮುಂದಾಗಿದೆ. ಕೃತ್ಯ ನಡೆಸಿದ ಆರೋಪಿಯನ್ನ ಗಡಿಪಾರು ಮಾಡಬೇಕು, ಇದರ ಹಿಂದಿನ ಶಕ್ತಿಯಾವುದು ಎಂಬುದು ಬಹಿರಂಗ ಪಡಿಸಬೇಕು. 


ಇತ್ತೀಚೆಗೆ ನೇತ್ರಾವತಿ ನದಿಯಲ್ಲಿ ಗೋತ್ಯಾಜ್ಯಗಳನ್ನ ಮೂಟೆಗಟ್ಟಲೆ ಸುರಿದು ಅಪವಿತ್ರಗೊಳುಸಲಾಗಿದೆ. ಗೋಹತ್ಯೆ ಎಂಬುದು ನಿರಂತರವಾಗಿದೆ. ಇವುಗಳಿಗೆ ಬ್ರೇಕ್ ಹಾಕಬೇಕು ಎಂದು ರಾಷ್ಟ್ರಭಕ್ತರ ಬಳಗ ಮನವಿಯಲ್ಲಿ ಆಗ್ರಹಿಸಿದೆ. 



Post a Comment

أحدث أقدم