ಹೊಸನಗರ ಮತ್ತು ಸಾಗರ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇದನ್ನ ತಪ್ಪಿಸಲು ಕ್ರಮ ಕೈಗೊಳ್ಳುವುದಾಗಿ ಸಿಸಿಎಫ್ ಹನುಮಂತಪ್ಪ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ.
ತನ್ಮನ್ನ ಭೇಟಿಯಾದ ಬಿಜೆಪಿ ನಿಯೋಗಕ್ಕೆ ಭರವಸೆ ನೀಡಿದ ಸಿಸಿಎಫ್, ಹೊಸನಗರ ಮತ್ತು ಸಾಗರದ ಭಾಗದಲ್ಲಿ 10 ಆನೆಗಳಿರುವುದು ಕಂಡು ಬಂದಿದೆ. ಮಂಜರಿಕೊಪ್ಪದಲ್ಲಿ ಆನೆಗಳು ಕಂಡು ಬಂದಿದ್ದು ಆಗೊಮ್ಮೆ ಈಗೊಮ್ಮೆ ಅರಸಾಳು ಭಾಗದಲ್ಲಿ ಆನೆಗಳು ಕಂಡು ಬಂದಿದೆ. ಈಗ ಬೆಳೆ ಬಂದ ಕಾರಣ ಆನೆಗಳು ಕಾಣಿಸಿಕೊಂಡಿದೆ. ಇದು ಕೊರಗಿಯಿಂದ ಬಂದಿದೆ ಎಂಬುದು ಇಲಾಖೆಯ ಮಾಹಿತಿ ಎಂದರು.
ಕಳೆದ ವರ್ಷವೂ ಈ ಭಾಗದಲ್ಲಿ ಮೂರು ಆನೆಗಳು ಕಾಣಿಸಿಕೊಂಡವು, ಈ ಬಾರಿ 5 ಆನೆಗಳು ಕಾಣಿಸಿಕೊಂಡಿವೆ. ಎರಡು ಹೆಣ್ಣಾನೆ ಮೂರು ಗಂಡಾನೆ ಕಾಣಿಸಿಕೊಂಡಿದೆ. ಕೊರಗಿಯಲ್ಲಿ ಕಾಣಿಸಿಕೊಂಡ ಆನೆಗಳು ಕಲ್ಮನೆ ಮತ್ತು ಬೈರಾಪುರಕ್ಕೆ ಈ ಕಾಡಾನೆ ಹೋಗಿ ಬರಲಿದೆ ಎಂದು ಹೇಳಿದರು.
ಅರಸಾಳಿನ ವರೆಗೆ ಕಳೆದ ಬಾರಿ ಇಲ್ಲಿ ಕಾಣಿಸಿಕೊಂಡ ಮೂರು ಅನೆ ಸೇರಿ ಒಟ್ಟು 15 ಕಾಡಾನೆ ಓಡಿಸುವ ಕಾರ್ಯಾಚರಣೆ ಮಾಡಲಾಗಿತ್ತು. ಇನ್ನೇನು ಆನೆ ಅರಸಾಳು ದಾಟಿಹೋಗಲಿದೆ ಎಂದು ಅನ್ಕೊಂಡಿದ್ದ ವೇಳೆ ಬೈಕ್ ಹಾಗೂ ಇತರೆ ವಾಹನಗಳ ಶಬ್ದದಿಂದ ಅಲ್ಲೇ ಉಳಿದು ಕೊಂಡ ಪರಿಣಾಮ ಈ ಭಾಗದಲ್ಲಿ ಕಾಡಾನೆ ಹೆಚ್ಚಾಗಿದೆ. ಜೊತೆಗೆ ಗಂಡು ಕಾಡಾನೆಗಳು ಬೆದೆಗೆ ಬಂದಾಗ ಕಾಡಾನೆಗಳು ಮದವೇರಿದಂತೆ ವರ್ತಿಸುತ್ತದೆ. ಆಗ ಗಂಡಾನೆಗಳು ಹತ್ತಿರ ಹೋಗೊಲ್ಲದ ಕಾರಣ ಚದುರಿದಂತೆ ಈ ಭಾಗದಲ್ಲಿ ಕಾಣಿಸಿಕೊಂಡ ಎಂದು ಸಿಸಿಎಫ್ ತಿಳಿಸಿದರು.
ಇದಕ್ಕೆ ಗದರಿಸಿದ ಶಾಸಕ ಆರಗ ಜ್ಞಾನೇಂದ್ರ ಮೊದಲು ಆನೆ ಕಾರಿಡಾರ್ ಗಳ ಮೂಲಕ ಆನೆ ಊರಿಗೆ ಬರ್ತಾ ಇದ್ದಾವೆ ಎನ್ನಲಾಗುತ್ತಿತ್ತು. ಈ ಆನೆ ಕಾರಿಡಾರ್ ಬದಲಾಗುತ್ತಿದೆ. ಹೆದ್ದಾರಿಪುರ ಹುಂಚದಕಟ್ಟೆಯ ವರೆಗೆ ಆನೆ ಬರುತ್ತಿವೆ. ಇದು ಅಪಾಯ ಎಂದ ಶಾಸಕರಿಗೆ ಹೆದರಿದಂತೆ ಕಂಡುಬಂದ ಸಿಸಿಎಪ್ ಕಾಡಾನೆ ಓಡಿಸುವ ಭರವಸೆ ನೀಡಿದರು.
إرسال تعليق