ಭದ್ರಾವತಿಯ ಭೋವಿ ಕಾಲೋನಿಯ ಮನೆಯೊಂದರಲ್ಲಿ ಬೆಂಕಿ(fire) ಕಾಣಿಸಿಕೊಂಡಿದ್ದು, ಗೃಹ ಬಳಕೆಯ(home usage) ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಮುಕ್ಕೂರಮ್ಮ ಎಂಬುವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಮನೆಯಲ್ಲಿರುವ ಗೃಹ ಬಳಕೆ ವಸ್ತುಗಳಿಗೆ ಹಾಗೂ ಟಿವಿ ಫ್ರಿಜ್ ಗೃಹ ಬಳಕೆಯ ಪಾತ್ರಗಳು ಹಾಗೂ ದಿನಸಿ ಧಾನ್ಯಗಳು ಬಟ್ಟೆಗಳು ದಿವಾನ್ ಕಟ್ ಹಾಗೂ ಎಲ್ಲಾ ಎಲೆಕ್ಟ್ರಿಕ್ ವೈಯರ್‌ಗಳು (electric wires) ಸ್ವಲ್ಪ ಆಭರಣ (jewellery) ಹಾಗೂ ನಗದು (cash)ಹಾಗೂ ಮನೆ ರೆಕಾರ್ಡ್ಸ್ ಮತ್ತು ಮನೆಯ ಹೆಂಚು ಇತರೆ ವಸ್ತುಗಳಿಗೆ ಬೆಂಕಿಯಿಂದ ಹಾನಿಯಾಗಿದೆ.
ಅಪಾರ ನಷ್ಟವಾಗಿರುವ ಮುಕ್ಕೂರಮ್ಮನವರಿಗೆ ಇನ್ನೊಂದು ಮನೆಯಿದ್ದು ಆ ಹೊಸ ಮನೆಗೆ ಇನ್ನೂ ಶಿಫ್ಟ್ ಆಗಿರಲಿಲ್ಲ. ಅಷ್ಟರಲ್ಲೇ ಈ ಬೆಂಕಿ ಅನಾಹುತ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಅಗ್ನಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀ ವಸಂತಕುಮಾರ್ ಎನ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ನಾಗೇಂದ್ರ ಜಿ ಜಿ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ, ಸಿಬ್ಬಂದಿಗಳಾದ ಆನಂದ, ಅರುಣ್ ಕುಮಾರ್, ಸುರೇಶ್, ಮಂಜುನಾಥ, ಸಂತೋಷ್, ಶಬ್ಬೀರ್ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
إرسال تعليق