ಶಾಸನ ಬದ್ದವಾಗಿ ರೈತರ ಬೆಳೆಗೆ ಕನಿಷ್ಠಬೆಂಬಲ ಬೆಲೆ ಜಾರಿಗೊಳಿಸುವಂತೆ ದೆಹಲಿಯಲ್ಲಿ ಜಗಜೀತ್ ಸಿಂಗ್ ದಲ್ಲೇವಾಲ್ ಇವರ ಉಪವಾಸ ಕುಳಿತಿದ್ದರು ಕೇಂದ್ರ ಸರ್ಕಾರದ ಮೌನನವನ್ನ ಖಂಡಿಸಿ ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರ ಪ್ರತಿಕೃತಿ ದಹನ ಮಾಡಿ ರೈತ ಸಂಘಟಬೆ ಪ್ರತಿಭಟಿಸಿದೆ.
45 ದಿನಗಳ ದೆಹಲಿಯಲ್ಲಿ ಕೇಂದ್ರ ಸರ್ಕಾರ ಕೃಷಿ ಬೆಳೆಗೆ ಎಂಎಸ್ ಪಿ ನಿಗದಿ ಪಡಿಸುವಂತೆ, ದೆಹಲಿಯಲ್ಲಿ ದಲ್ಲೇವಾಲಾ ಪ್ರತಿಭಟಿಸುತ್ತಿದ್ದಾರೆ. ಆದರೆ ಸರ್ಕಾರ ಮೌನವಾಗಿದೆ. ಸ್ವಾಮಿನಾಥನ್ ವರದಿಯಲ್ಲಿ ಬೆಳೆಗೆ ಎಂಎಸ್ಪಿ ನಿಗದಿ ಪಡಿಸುವುದಾಗಿ ಹೇಳಿದ್ದ ಸರ್ಕಾರ ಜವವ್ದಾರಿಯಿಂದ ನುಣಚಿಕೊಂಡಿದೆ ಎಂದು ಪ್ರತಿಭಟಿಸಾಯಿತು.
ಈ ಹಿನ್ನಲೆಯಲ್ಲಿ ರೈತ ಸಂಘ ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಹಮ್ನಿಕೊಙಡಿದೆ. ಅದರ ಪ್ರಯುಕ್ತ ಮಹಾವೀರ ವೃತ್ತದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೃಷಿ ಸಚಿವ ಷೌಹಾಣ್ ರ ಪ್ರತಿಕೃತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಮನವಿ ಸಲ್ಲಿಸಕಾಯಿತು.
ಪ್ರತಿಭಟನೆಯಲ್ಲಿ ಪ್ರತಿಕೃತಿದಹನಕ್ಕೂ ಮುಂಚೆ ಪ್ರತಿಭಟನಾಕಾರರು ಧರಿಸಿದ್ದ ಟವೆಲ್ ನ್ನ ಮೇಲೆತ್ತಿ ಬೀಸಿ ಪ್ರತಿಕೃತಿಯನ್ನ ಸುಡಲಾಯಿತು. ಪ್ರತಿಭಟನೆಯಲ್ಲಿ ಬಸವರಾಜ್ ಸಂಗೊಳ್, ಬಸಪ್ಪ ಮೇಷ್ಟ್ರು, ರಾಜ್ತಾಧ್ಯಕ್ಷ ಕರಿಬಸಪ್ಪ ಮೊದಲಾದವರು ಭಾಗಿಯಾಗಿದ್ದರು.
إرسال تعليق