ಜಿಲ್ಲಾ ಉಸ್ತುವಾರಿ ಮಂತ್ರಿಗಳ ವಿರೋಧ ಮೊದಲಬಾರಿಗೆ ಸಂಸದ ರಾಘವೇಂದ್ರ ರೋಷಾಗ್ನಿಯನ್ನ ಹೊರಹಾಕಿದ್ದಾರೆ. ಸಂಸದರು ಬಹಿರಂಗವಾಗಿ ಇತರರ ವಿರುದ್ಧ ಗರಂ ಆಗಿರುವುದು ಕಡಿಮೆ. ಆದರೆ ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾಜಿ ಸಚಿವ ಹರತಾಳು ಹಾಲಪ್ಪನವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಸಂಸದರನ್ನ ಕೆರಳಿಸಿದೆ.
ಬಿಜೆಪಿ ಪಕ್ಷಗಳ ನಾಯಕರ ಬಗ್ಗೆ ಸಚಿವ ಮಧು ಬಂಗಾರಪ್ಪ ಹಗುರವಾಗಿ ಮಾತನಾಡುತ್ತಿದ್ದಾರೆ. ಮಾಜಿ ಸಚಿವ ಹರತಾಳ ಹಾಲಪ್ಪ ಮತ್ತು ಶಾಸಕ ಚೆನ್ನಬಸಪ್ಪನವರ ವಿರುದ್ಧ ಸಚಿವರು ನಡೆದುಕೊಂಡ ಬಗ್ಗೆ ಬೇಸರ ತಂದಿದೆ. ಕಾಡಾನೆ ವಿಚಾರದಲ್ಲಿ ಹರತಾಳ ಹಾಲಪ್ಪ ಅವರ ಅವಧಿಯಲ್ಲಿ ಏನೋ ಸೆಗಣಿ ತಿನ್ನುತ್ತಿದ್ದಾನಾ? ಎಂದು ಸಚಿವ ಮಧು ಬಂಗಾರಪ್ಪ ಹೇಳಿರುವುದರ ಬಗ್ಗೆ ಸಙಸದರು ಕೆಂಡ ಮಂಡಲರಾಗಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ, ನಾವು ಅವರಿಗೆ ಗೌರವ ಕೊಡುತ್ತಿದ್ದೇವೆ. ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರ ವಿಳಂಬ, ವಿಎಸ್ಐಎಲ್ ಎಲ್ಲವೂ ನಿಮ್ಮ ಪಾಪದ ಕೂಸು ಇದು. ಹಂತ ಹಂತವಾಗಿ ಸಮಸ್ಯೆ ನಿವಾರಣೆ ಮಾಡುತ್ತೇವೆ.70 ವರ್ಷ ಆಡಳಿತ ಮಾಡಿದ ನೀವು ಮಾಡಿದ್ದೇನು? ಶರಾವತಿ ಸಂತ್ರಸ್ತರು ಕಣ್ಣೀರು ನಿಮ್ಮ ಪಾಪದ ಕೂಸು ಎಂದು ಸಚಿವರ ವಿರುದ್ಧ ಗರಂ ಆದರು.
ನಾನು ಅರಣ್ಯ ಸಚಿವರ ಬಗ್ಗೆ ಮಾತನಾಡಿದರೇ ನಿಮಗೆ ಏನೂ ಕಷ್ಟ. ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೇನೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ.ನಿಮ್ಮ ಪಾಪದ ಕೂಸುಗಳು ನಾನು ತೊಳೆಯುವ ಕೆಲಸ ಮಾಡುತ್ತಿದ್ದೇವೆ. ಸರಕಾರ ಯಾರ ಅಪ್ಪನ ಆಸ್ತಿಯಲ್ಲ ಎಂದು ತಿರುಗೇಟು ನೀಡಿದರು.
ಕೇಂದ್ರದಿಂದ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನ ತಂದಿದ್ದೇನೆ. ನಿಮ್ಮ ಗ್ಯಾರಂಟಿ ಯೋಜನೆಗಳು ಜಾರಿಗೆ ತಙದಿರುವುದು ಸಂತೋಷ. ಕುವೆಂಪು ವಿಶ್ವ ವಿದ್ಯಾಲಯವನ್ನ ತಂದಿರುವುದು ಬಂಗಾರಪ್ಪನವರು ಎಂದು ಸಚಿವರು ಹೇಳಿದ್ದಾರೆ. ಇವರಿಗೆ ಮಾಹಿತಿನೇ ಇಲ್ಲ. ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ ಕುವೆಂಪು ವಿವಿ ಆಗಿದೆ. ಅವರ ತಂದೆಯ ಕಾಲದಲ್ಲಿ ಆಗಿಲ್ಲ. ಅಹಂಕರ ಕಡಿಮೆ ಮಾಡಿಕೊಂಡು ಕೆಲಸ ಮಾಡಲಿ. ದುರಹಂಕಾರ ನಿಮಗೆ ಎಷ್ಟು ಒಳ್ಳೆಯದಲ್ಲ. ಹಲವು ರಾಜಕಾರಣಿಗಳನ್ನ ಕೊಟ್ಟ ಜಿಲ್ಲೆ ನಮ್ಮದಾಗಿದೆ. ವಿಪಕ್ಷಗಳು ಏನು ಮಾಡಬೇಕು ಅದನ್ನ ನಾವು ಮಡುತ್ತಿದ್ದೇವೆ
ವಿಪಕ್ಷಗಳ ವಿರುದ್ಧ ನಿಮ್ಮ ಟೀಕೆ ಸ್ವಾಗತ ಅದೂ ಗೆರೆ ದಾಟಿ ಮಾತನಾಡುವುದು ಸರಿಯಲ್ಲ. ಶಾಸಕ ಚೆನ್ನಬಸಪ್ಪನವರು ಆಶ್ರಯ ಬಡಾವಣೆಯ ವಿಚಾರದಲ್ಲಿ ದಿನಾಂಕ ನಿಗದಿ ಪಡಿಸಿದರೆ ಅದನ್ನ ಉದ್ದೇಶ ಪೂರಕವಸಗಿ ಮುಂದುಹಾಕುವುದು ಎಷ್ಟು ಸರಿ?
ಮಂತ್ರಿ ಸ್ಥಾನ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಡವಳಿಕೆ ಕಡಿಮೆ ಮಾಡಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿ. ಜಿಲ್ಲೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರು ಕೆಲಸ ಮಾಡಿದ್ದಾರೆ. ಆಶ್ರಯ ಮನೆಗಳಲ್ಲಿ ಒಂದು ಟ್ಯೂಬ್ ಲೈಟ್ ಹಾಕಿ ಬಿಲ್ಡಪ್ ಮಾಡಿಕೊಳ್ಳುವುದಲ್ಲ. ಇಬ್ಬೂರು ಒಟ್ಟಾಗಿ ಅಭಿವೃದ್ಧಿ ತೇರು ಎಳೆಯೋಣ ಎಂದು ಕಿವಿ ಮಾತು ಹೇಳಿದರು.
إرسال تعليق